ಇಂದು ವಿವಿಧೆಡೆ ಶಿವರಾತ್ರಿ ಉತ್ಸವ
0
ಮಾರ್ಚ್ 03, 2019
ಕಾಸರಗೋಡು: ಮಹಾ ಪರಶಿವನ ಪ್ರಧಾನ ಉತ್ಸವವಾದ ಮಹಾ ಶಿವರಾತ್ರಿ ಇಂದು ಜಿಲ್ಲೆಯಾದ್ಯಂತದ ವಿವಿಧ ಶಿವ ದೇವಾಲಯಗಳಲ್ಲಿ ನಡೆಯಲಿದ್ದು, ಭಕ್ತ ಜನರು ಶ್ರದ್ದಾ ಭಕ್ತಿಯಿಂದ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ವರ್ಕಾಡಿ ಸಮೀಪದ ಪಾತೂರು ಶ್ರೀಸೂರ್ಯೇಶ್ವರ ದೇವಾಲಯ, ಹೊಸಬೆಟ್ಟು ಕೀರ್ತೇಶ್ವರ ದೇವಾಲಯ, ಮಂಜೇಶ್ವರದ ಶ್ರೀಅನಂತೇಶ್ವರ ದೇವಾಲಯ, ಕುಂಬಳೆ ಶೇಡಿಕಾವು ಶ್ರೀಶಂಕರನಾರಾಯಣ ದೇವಾಲಯ,ಎಡನೀರು ಸಮೀಪದ ಪಾಡಿ ಶ್ರೀಪಂಚಲಿಂಗೇಶ್ವರ ದೇವಾಲಯ, ಬಾಯಾರು ಬದಿಯಾರು ಶ್ರೀಪಂಚಲಿಂಗೇಶ್ವರ, ಮುಳ್ಳೇರಿಯದ ಶಿವ ದೇವಾಲಯ, ಅಡೂರು ಶ್ರೀಮಹಾಲಿಂಗೇಶ್ವರ ದೇವಾಲಯ, ದೇಲಂಪಾಡಿ ಮಹಾಲಿಂಗೇಶ್ವರ ದೇವಾಲಯ, ಬಡಾಜೆ ಶ್ರೀಮಹಾಲಿಂಗೇಶ್ವರ, ತಲೆಕಳ ಶ್ರೀಸದಾಶಿವ ದೇವಾಲಯ, ಮೂಡಂಬೈಲ್ ಶ್ರೀಮಹಾಲಿಂಗೇಶ್ವರ,ಅಂಬಾರು ಶ್ರೀಸದಾಶಿವ ದೇವಾಲಯ, ಕಿದೂರು ಶ್ರೀಮಹಾದೇವ ದೇವಾಲಯ, ಗುಡ್ಡೆ ಮಹಾಲಿಂಗೇಶ್ವರ ದೇವಾಲಯಗಳ ಸಹಿತ ವಿವಿಧೆಡೆ ಶಿವರಾತ್ರಿ ಉತ್ಸವಗಳು ನಡೆಯಲಿವೆ.