ಮಾದರಿ ಪರೀಕ್ಷೆ
0
ಮಾರ್ಚ್ 02, 2019
ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಕೆಎಸ್‍ಟಿಎ(ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್) ವಿದ್ಯಾಜ್ಯೋತಿ ಸಮಗ್ರ ವಿದ್ಯಾಭ್ಯಾಸ ಕಾರ್ಯಕ್ರಮ್ ಅಂಗವಾಗಿ ಯುಎಸ್‍ಎಸ್ ಮತ್ತು ಎಲ್‍ಎಸ್‍ಎಸ್ ಮಾದರಿ ಪರೀಕ್ಷೆಯು ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಜರಗಿತು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಕಾರ್ಯಕ್ರಮ ಉದ್ಘಾಟಿಸಿದರು. ಕೆಎಸ್‍ಟಿಎ ಘಟಕಾಧ್ಯಕ್ಷೆ ಕೃಷ್ಣವೇಣಿ ಅಧ್ಯಕ್ಷತೆ ವಹಿಸಿದ್ದರು.ಸಂಘಟನೆಯ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ, ಪ್ರೇಮರಾಜ್, ಉಪಜಿಲ್ಲಾ ಕಾರ್ಯಕಾರೀ ಸಮಿತಿ ಸದಸ್ಯರುಗಳಾದ ರತೀಶ್ ಬಾಬು, ವನಿತಾ, ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 120 ವಿದ್ಯಾರ್ಥಿಗಳು ಎಲ್‍ಎಸ್‍ಎಸ್ ಹಾಗೂ 85 ವಿದ್ಯಾರ್ಥಿಗಳು ಯುಎಸ್‍ಎಸ್ ಮಾದರಿ ಪರೀಕ್ಷೆಗೆ ಹಾಜರಿದ್ದರು. ಅಹಮ್ಮದ್ ಹುಸೈನ್ ಪಿ. ಸ್ವಾಗತಿಸಿ, ಕೃಷ್ಣ ಕುಮಾರ್ ವಂದಿಸಿದರು.