ನೇರೆಪ್ಪಾಡಿ ಬಸ್ ತಂಗುದಾಣ ಉದ್ಘಾಟನೆ
0
ಮಾರ್ಚ್ 03, 2019
ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿ ನೇರೆಪ್ಪಾಡಿ ಬಸ್ ತಂಗುದಾಣದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತಿಮತ್ ಝೌರ ಶನಿವಾರ ನೆರವೇರಿಸಿದರು.
ಉಪಾಧ್ಯಕ್ಷ ಆನಂದ ಕೆ.ಮವ್ವಾರು ಅಧ್ಯಕ್ಷತೆ ವಹಿಸಿದರು. ಗ್ರಾ.ಪಂ.ಸದಸ್ಯೆ ಎಲಿಜಬೆತ್ ಕ್ರಾಸ್ತ, ಸದಸ್ಯರುಗಳಾದ ಎಸ್.ಮುಹಮ್ಮದ್ ಕುಂಞÂ, ಅಬ್ದುಲ್ಲ ಕುಂಞÂ ಬಿ.ಟಿ, ಶಾಂತ ಎಸ್.ಭಟ್, ಶೈಲಜ ಭಟ್, ಶಶಿಧರ, ಸಾಮಾಜಿಕ ಕಾರ್ಯಕರ್ತ ಡಾ|ವೇಣುಗೋಪಾಲ, ನರಸಿಂಹ ಭಟ್ ಮುಂತಾದವರು ಮಾತನಾಡಿದರು.
ಬಸ್ ತಂಗುದಾಣಕ್ಕೆ ಸ್ಥಳದಾನ ಮಾಡಿದ ಅಂದುಞÂ ನೇರೆಪ್ಪಾಡಿ ಅವರನ್ನು ಆನಂದ ಮವ್ವಾರ್ ಶಾಲು ಹೊದಿಸಿ ಸಮ್ಮಾನಿಸಿದರು. ವಾರ್ಡ್ ಸದಸ್ಯೆ ಎಲಿಜಬೆತ್ ಕ್ರಾಸ್ತಾ ಸ್ವಾಗತಿಸಿದರು. ಮೊಹಮ್ಮದ್ ಶರೀಫ್ ವಂದಿಸಿದರು.