ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಮನೆ ಹಸ್ತಾಂತರ
0
ಮಾರ್ಚ್ 06, 2019
ಮುಳ್ಳೇರಿಯ: ಪ್ರಧಾನಮಂತ್ರಿ ಆವಾಸ್ ಯೋಜನೆಗೊಳಪಟ್ಟಂತೆ ಕಾರಡ್ಕ ಬ್ಲಾಕ್ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಮೊದಲ ಮನೆಯ ಕೀಲಿಕೈ ಯನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ, ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಮನೆಯೊಡತಿ ಸರಿತಾ ರಿಗೆ ಕೀಲಿಕೈ ಹಸ್ಥಾಂತರಿಸಿದರು. ಗ್ರಾ.ಪಂ. ಅಧ್ಯಕ್ಷೆ ಅನಸೂಯ ರೈ ಉದ್ಘಾಟಿಸಿದರು. ಗ್ರಾ.ಪಂ.ಸದಸ್ಯ, ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬ್ಲಾ.ಪಂ.ಸದಸ್ಯ ಸುಂದರ ಮವ್ವಾರು, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ರೇಣುಕಾದೇವಿ, ಜನನಿ ಎಂ, ವಿಜಯಕುಮಾರ್, ಗ್ರಾ.ಪಂ.ಸದಸ್ಯರುಗಳಾದ ಬಾಲಕೃಷ್ಣನ್, ಸ್ಮಿತಾ, ಗ್ರಾಮ ವಿಸ್ತರಣಾಧಿಕಾರಿ ಶಾಂತಾ, ಸಿಡಿಎಸ್ ಅಧ್ಯಕ್ಷೆ ವಸಂತಿ ಮೊದಲಾದವರು ಉಪಸ್ಥಿತರಿದ್ದರು.