HEALTH TIPS

ಕ್ಷಿಪಣಿ ತಂತ್ರಜ್ಞಾನದ ಅಭಿವೃದ್ಧಿಗಾಗಿ ಡಿಆರ್ ಡಿಒ ಮುಖ್ಯಸ್ಥರಿಗೆ ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿ

ನವದೆಹಲಿ:ಡಿಆರ್ ಡಿಒ ಮುಖ್ಯಸ್ಥ ಜಿ ಸತೀಶ್ ರೆಡ್ಡಿ ಭಾರತದಲ್ಲಿ ಕ್ಷಿಪಣಿ ಅಭಿವೃದ್ಧಿಯಲ್ಲಿ ನೀಡಿರುವ ಕೊಡುಗೆಗಾಗಿ ಅಮೆರಿಕಾದ ಎಐಎಎ ಸಂಸ್ಥೆಯಿಂದ 2019ರ ಪ್ರತಿಷ್ಠಿತ ಕ್ಷಿಪಣಿ ವ್ಯವಸ್ಥೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ಷಿಪಣಿ ತಂತ್ರಜ್ಞಾನ ವ್ಯವಸ್ಥೆಯ ಅಭಿವೃದ್ಧಿ ಹಾಗೂ ಅನುಷ್ಠಾನವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಎಐಎಎ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಭಾರತದಲ್ಲಿ ಸ್ವದೇಶಿ ನಿರ್ಮಿತ ಕ್ಷಿಪಣಿಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಯುದ್ಧ ತಂತ್ರದ ವ್ಯವಸ್ಥೆಗಾಗಿ ಸುಮಾರು 30 ವರ್ಷಗಳ ಕಾಲ ಮಹತ್ವದ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಸೂಸೈಟಿ ಹೇಳಿದೆ. ಸತೀಶ್ ರೆಡ್ಡಿ ಡಿಆರ್ ಡಿ ಒ ಮುಖ್ಯಸ್ಥರಾಗುವ ಮುನ್ನ ಅಗ್ನಿ ಸರಣಿಯ ಅಣ್ವಸ್ತ್ರ ಪರಮಾಣುಗಳ ಕಾರ್ಯತಂತ್ರ ಕಾರ್ಯಕ್ರಮಗಳು ಸೇರಿದಂತೆ ಇಡೀ ಡಿಆರ್ ಡಿಒದ ಕ್ಷಿಪಣಿ ವಿಭಾಗದ ಮುಖ್ಯಸ್ಥರಾಗಿದ್ದರು. ಭೂಮಿಯಿಂದ ಆಕಾಶಕ್ಕೆ ವೇಗವಾಗಿ ಚಿಮ್ಮುವ ಕ್ಷಿಪಣಿ ವ್ಯವಸ್ಥೆ , ನಾಗ್ ಟ್ಯಾಂಕ್ ವಿರೋಧಿ ಯುದ್ದೋಪಕರಣಗಳ ಅಭಿವೃದ್ಧಿಯಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಆಕಾಶ್ ವಾಯು ರಕ್ಷಣಾ ವ್ಯವಸ್ಥೆಯ ಅಭಿವೃದ್ದಿಯಲ್ಲೂ ಸತೀಶ್ ರೆಡ್ಡಿ ಅವರು ಪ್ರಮುಖವಾದ ಪಾತ್ರ ವಹಿಸಿದ್ದಾರೆ. ಇದರಿಂದಾಗಿ ವಿದೇಶಿ ವಿನಿಮಯ ಉಳಿತಾಯಕ್ಕೆ ನೆರವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries