ಮೇಗಿನ ಕಡಾರು ಕಾಂಕ್ರೀಟ್ ರಸ್ತೆ ಉದ್ಘಾಟನೆ
0
ಮಾರ್ಚ್ 03, 2019
ಬದಿಯಡ್ಕ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯ ಮೂಲಕ ನಿರ್ಮಿಸಲಾದ ಮೇಗಿನ ಕಡಾರು ಕಾಂಕ್ರೀಟ್ ರಸ್ತೆಯನ್ನು ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು.
ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಖಾತರಿ ಯೋಜನೆಯ ಉಪ ಇಂಜಿನಿಯರ್ ಆಶ್ವತಿ, ಓವರ್‍ಸೀಯರ್ ಸಾಜಿದ, ಲೆಕ್ಕಪರಿಶೋಧಕ ಹೈದರಾಲಿ, ರಜಿತ, ಮಾಜಿ ಬ್ಲೋಕ್ ಪಂಚಾಯತ್ ಸದಸ್ಯ ರಮಾನಾಥ ರೈ ಮೇಗಿನ ಕಡಾರು, ನಿವೃತ್ತ ಸೈನಿಕ ಲೀಬಾ ಕುಂಜು, ಪ್ರಭಾಕರ ರೈ ಹಾಗೂ ಊರವರು ಉಪಸ್ಥಿತರಿದ್ದರು. ವಾರ್ಡು ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಡಿಎಸ್‍ನ ಅನ್ನಂ ಸಿ.ಎಂ. ವಂದಿಸಿದರು.