ಎಡರಂಗ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್ ನಾಮಪತ್ರ ಸಲ್ಲಿಕೆ-ಜಿಲ್ಲೆಯಲ್ಲಿ ಮೊದಲ ನಾಮಪತ್ರ
0
ಮಾರ್ಚ್ 30, 2019
ಕಾಸರಗೋಡು: ಎಡರಂಗದ ಸಿಪಿಎಂ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್ ಶನಿವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು. ಈ ಮೂಲಕ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ನಾಮಪತ್ರ ಸಲ್ಲಿಸಿದ ಖ್ಯಾತಿ ಕೆ.ಪಿ.ಸತೀಶ್ಚಂದ್ರನ್ ಅವರ ಪಾಲಾಗಿದೆ.
ವಿದ್ಯಾನಗರದಲ್ಲಿರುವ ಸಿಪಿಎಂ ಜಿಲ್ಲಾ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಸಾಗಿ ಕೆ.ಪಿ.ಸತೀಶ್ಚಂದ್ರನ್ ಜಿಲ್ಲಾಧಿಕಾರಿಯಾಗಿರುವ ಚುನಾವಣಾಧಿಕಾರಿ ಡಾ.ಡಿ.ಸಜಿತ್‍ಬಾಬು ಅವರಿಗೆ ಸಲ್ಲಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಮಾಸ್ತರ್ ಸಹಿತ ಪ್ರಮುಖ ನೇತಾರರು, ಕಾರ್ಯಕರ್ತರು ಜೊತೆಯಲ್ಲಿದ್ದರು. ಮೂರು ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು. ಡಮ್ಮಿ ಅಭ್ಯರ್ಥಿಯಾಗಿ ಸಿ.ಪಿ.ಎಂ. ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಸಿ.ಎಚ್.ಕುಂಞಂಬು ನಾಮಪತ್ರ ಸಲ್ಲಿಸಿದ್ದಾರೆ.
ಎಡರಂಗದ ಮುಖಂಡರಾದ ಸಚಿವ ಇ.ಚಂದ್ರಶೇಖರನ್, ಸಂಸದ ಪಿ.ಕರುಣಾರನ್, ಎಂ.ವಿ.ಗೋವಿಂದನ್ ಮಾಸ್ತರ್, ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ನ್ಯಾಯವಾದಿ ಸಿ.ಎಚ್.ಕುಂಞಂಬು, ಸಿಪಿಂ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಪಿಲ್, ಶಾಸಕರಾದ ಟಿ.ವಿ.ರಾಜೇಶ್, ಕೆ.ಕುಂಞÂರಾಮನ್, ಎಂ.ರಾಜಗೋಪಾಲ್, ಸಿ.ಕೃಷ್ಣನ್ ಮೊದಲಾದವರು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿದ್ದರು.
ಸಿಪಿಎಂ ಜಿಲ್ಲಾ ಸಮಿತಿ ಕಚೇರಿಯಿರುವ ವಿದ್ಯಾನಗರ ಬಿ.ಸಿ.ರೋಡ್‍ನಲ್ಲಿ ಎ.ಕೆ.ಜಿ. ಮಂದಿರದಿಂದ ಭಾರೀ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ನಾಮಪತ್ರ ಸಲ್ಲಿಸಲಾಯಿತು.