HEALTH TIPS

ಬೀಚ್ ಕೊಡೆ ವಿತರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ

ಲಾಟರಿ ಕಾರ್ಮಿಕರನ್ನು ನಿರ್ಲಕ್ಷಿಸಿದರೆ ನಾಡಿನ ಚರಿತ್ರೆ ಅಪೂರ್ಣ : ಶಾಸಕ ಎನ್.ಎ.ನೆಲ್ಲಿಕುನ್ನು ಕಾಸರಗೋಡು: ಲಾಟರಿ ವಲಯದ ಕಾರ್ಮಿಕರು ರಾಜ್ಯದ ಆರ್ಥಿಕ ಬಲ ಹೆಚ್ಚಿಸುವವರು. ಅವರನ್ನು ನಿರ್ಲಕ್ಷಿಸಿದರೆ ನಾಡಿನ ಚರಿತ್ರೆ ಅಪೂರ್ಣವಾದೀತು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು. ಕೇರಳ ರಾಜ್ಯ ಕಲ್ಯಾಣ ನಿಧಿ ಮಂಡಳಿ ಜಿಲ್ಲಾ ಕಚೇರಿ ವತಿಯಿಂದ ಬೀದಿಬದಿ ಲಾಟರಿ ಮಾರಾಟಗಾರರಾಗಿರುವ ಕಲ್ಯಾಣ ನಿಧಿ ಸದಸ್ಯರಿಗೆ ನೀಡಲಾಗುವ ಬೀಚ್ ಅಂಬ್ರೆಲ್ಲ(ದೊಡ್ಡ ಕೊಡೆ) ವಿತರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದಿದ್ದು, ಅದನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲಾಟರಿ ಮಾರಾಟಗಾರರಿಗೆ ಅವರು ಕೊಡೆ ವಿತರಣೆ ನಡೆಸಿದರು. ರಾಜ್ಯಕ್ಕೆ ಲಾಟರಿ ವಲಯದ ದುಡಿಮೆಗಾರರು ನೀಡುತ್ತಿರುವ ಕೊಡುಗೆ ಗಮನಿಸಿದರೆ ಯಾವ ಆಡಳಿತೆಯೂ ಅವರ ಕುರಿತು ಅಸಡ್ಡೆ ತೋರದು. ಈ ನಿಟ್ಟಿನಲ್ಲಿ ಕಲ್ಯಾಣ ನಿಧಿ ಮಂಡಳಿ ಅನೇಕ ಜನಪರ ಯೋಜನೆಗಳನ್ನು ಈ ವಲಯದ ಮಂದಿಗಾಗಿ ಜಾರಿಗೊಳಿಸಿರುವುದು ಶ್ಲಾಘನೀಯ ಎಂದರು. ಭಾಗ್ಯದಾಯಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಭಾಗ್ಯವನ್ನು ಮಾರುತ್ತಿರುವ ಭಾಗ್ಯವಂತ ಲಾಟರಿ ಮಾರಾಟಗಾರರ ಬಗ್ಗೆ ಜನತೆಯ ಆಸಕ್ತಿ ಹೆಚ್ಚಬೇಕು. ನವಕೇರಳ ನಿರ್ಮಾಣದಲ್ಲಿ ಲಾಟರಿ ಕಾರ್ಮಿಕರ ಸಹಭಾಗಿತ್ವ ಅನಿವಾರ್ಯ ಎಂದವರು ಹೇಳಿದರು. ಮಂಡಳಿ ರಾಜ್ಯ ಸಮಿತಿ ಅಧ್ಯಕ್ಷ ಪಿ.ಆರ್.ಜಯಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂಡಳಿ ಲಾಟರಿ ವಲಯದ ಕಾರ್ಮಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಲಾಟರಿ ಎಂಬುದು ಜನಪರ ವ್ಯವಹಾರವಾಗಿದೆ. ಕಾರುಣ್ಯ ಲಾಟರಿ ಒಂದರಿಂದ ಮಾತ್ರ 39 ಸಾವಿರ ಜನ ಚಿಕಿತ್ಸಾ ಸಹಾಯ ಪಡೆದುಕೊಂಡಿದ್ದಾರೆ. 3 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಕಾರುಣ್ಯ ಯೋಜನೆ ಮೂಲಕ ಲಭಿಸುತ್ತಿದೆ. ಎಪ್ರಿಲ್ ತಿಂಗಳ ನಂತರ ಲಾಟರಿ ವಲಯದಲ್ಲಿ ಆರೋಗ್ಯ ಕಾರ್ಡ್ ನೀಡಲಾಗುತ್ತಿದ್ದು, 5 ಲಕ್ಷ ರೂ. ವರೆಗಿನ ಚಿಕಿತ್ಸಾ ಸೌಲಭ್ಯ ಪಡೆಯಲು ಇಲ್ಲಿ ಅವಕಾಶಗಳಿವೆ ಎಂದರು. ವಲಯದ ಮೂಲಕ ರಾಜ್ಯಸರಕಾರಕ್ಕೆ ಕಳೆದ ವರ್ಷ 10 ಸಾವಿರ ಕೋಟಿ ರೂ. ಆದಾಯ ಲಭಿಸಿದೆ. ಈ ವರ್ಷ 12 ಸಾವಿರ ಕೋಟಿ ರೂ. ಆದಾಯದ ನಿರೀಕ್ಷೆಯಿದೆ. ಇಷ್ಟು ಪೂರಕವಾದ ವಿಭಾಗವನ್ನು ರಾಜ್ಯ ಸರಕಾರವೂ ಅಕ್ಕರೆಯಿಂದ ಪೆÇೀಷಿಸಿದೆ ಎಂದು ಅವರು ಹೇಳಿದರು. ುಂಡಳಿ ಸದಸ್ಯ ವಿ.ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ., ಲಾಟರಿ ವಲಯದ ಬೇರೆ ಬೇರೆ ಸಂಘಟನೆಗಳ ನೇತಾರರಾದ ಪಿ.ಪ್ರಭಾಕರನ್, ಎನ್.ಕೆ.ಬಿಜು, ಸತ್ಯನಾಥನ್ ವಿ.ಬಿ., ಎ.ಮಧುಸೂದನನ್ ನಂಬ್ಯಾರ್, ಪಿ.ವಿ.ಉಮೇಶ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಲಾಟರಿ ಕಲ್ಯಾಣ ನಿಧಿ ಅಧಿಕಾರಿ ಕೆ.ಹರೀಶ ಸ್ವಾಗತಿಸಿ, ಸಹಾಯಕ ಅಧಿ.ಸಜುಕುಮಾರ್ ವಂದಿಸಿದರು. ಆಲಪ್ಪುಳ ಜಿಲ್ಲೆಯ ಕುಟುಂಬಶ್ರೀ ಸದಸ್ಯರು ಸಿದ್ಧಪಡಿಸಿದ ಬೀಚ್ ಕೊಡೆ ತಲಾ 150 ರೂ. ಮೌಲ್ಯ ಹೊಂದಿದ್ದು, ಮಂಡಳಿ ವಿತಯಿಂದ ಸದಸ್ಯರಾದ ಲಾಟರಿ ಮಾರಾಟಗಾರರಿಗೆ ಉಚಿತ ರೂಪದಲ್ಲಿ ವಿತರಿಸಲಾಯಿತು. ಈ ಮೂಲಕ ಬಿಸಿಲು, ಮಳೆಯಲ್ಲಿ ತಡೆಯಿಲ್ಲದೆ ವ್ಯವಹಾರ ನಡೆಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries