ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ನಿರ್ಮಿತಿಯ ರಸ್ತೆ ಉದ್ಘಾಟನೆ
0
ಮಾರ್ಚ್ 05, 2019
ಬದಿಯಡ್ಕ: ಬದಿಯಡ್ಕ ಗ್ರಾ.ಪಂ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಭಾಗವಾಗಿ ಕಿಳಿಂಗಾರ್ ವಾರ್ಡಿನ ಅನ್ನಪಲ್ಲಡ್ಕ ಕಿಳಿಂಗಾರ್ ಟ್ರಾನ್ಸ್‍ಫೆÇೀರ್ಮರ್ ರಸ್ತೆಯ ಕಾಂಕ್ರಿಟ್ ಕೆಲಸವನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ. ಬಶೀರ್ ಇತ್ತೀಚೆಗೆ ಉದ್ಘಾಟಿಸಿದರು.
ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಝೋನ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶಂಕರ.ಡಿ., ಸಿರಾಜ್ ಮೊಹಮ್ಮದ್, ಮಾಜಿ ಪಂ. ಅಧ್ಯಕ್ಷ ಮಾಹಿನ್ ಕೇಳೋಟ್, ಕಾಸರಗೋಡು ಜಿಲ್ಲಾ ಯೋಜನಾ ನಿರ್ದೇಶಕ ವಿ.ಕೆ. ದಿಲೀಪ್, ಕಾಸರಗೋಡು ಬ್ಲಾಕ್ ಅಧಿಕಾರಿ ನಾಗೇಶ್, ಕಿರಿಯ ಅಭಿಯಂತರ ಉಮ್ಮರ್, ಜಯರಾಜ್, ಬ್ಲಾಕ್ ಹಿರಿಯ ಅಭಿಯಂತರ ಸಫಾದ್ ಅಲಿ, ಅಕ್ರಡಿಟೆಡ್ ಅಭಿಯಂತರ ಅಶ್ವತಿ, ಓವರ್ ಸೀಯರ್ ಸಾಜಿದ ಎಸ್.ಯು., ಹೈದರ್ ಅಲಿ, ರಜಿತ ಕುಮಾರಿ ಎಂ.ಕೆ., ಜಯಲಕ್ಷ್ಮಿ , ಜಗನ್ನಾಥ ರೈ, ನವೀನ, ಕಾರ್ಮಿಕರು, ಸಾರ್ವಜನಿಕರು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.