ಶೇಡಿಕಾವಿನಲ್ಲಿ ಶಿವರಾತ್ರಿ ಉತ್ಸವ ಸಂಪನ್ನ
0
ಮಾರ್ಚ್ 06, 2019
ಕುಂಬಳೆ: ಶೇಡಿಕಾವು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಮಹಾ ಶಿವರಾತ್ರಿ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದಂಗವಾಗಿ ಸೋಮವಾರ ಬೆಳಿಗ್ಗೆ ಗಣಪತಿ ಹವನ, ಶತರುದ್ರ ಪಾರಾಯಣ, ಕಲಶಾಭಿಷೇಕ ನಡೆಯಿತು. ಬಳಿಕ ಪಂಚಾಮೃತಾಭಿಷೇಕ, ಸೀಯಾಳ ಅಭಿಷೇಕ, ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶಂ.ನಾ ಅಡಿಗ ಕುಂಬಳೆ ಇವರ ಶಿಷ್ಯೆಯರಾದ ಕಿರಣ್ ಅಡಿಗ ಸೂರಂಬೈಲ್ ಹಾಗೂ ನಿಶಾ ಅಡಿಗ ಶೇಡಿಕಾವು ಇವರಿಂದ ಹರಿಕಥಾ ಸಂಕೀರ್ತನೆ, ಅಪರಾಹ್ನ 3.30 ರಿಂದ ಶೇಡಿಕಾವು ಶ್ರೀಪಾರ್ಥಿಸುಬ್ಬ ಯಕ್ಷಗಾನ ಸಂಘದವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ6.30ಕ್ಕೆ ದೀಪಾರಾಧನೆ, 6.30 ರಿಂದ ಕುಂಬಳೆಯ ನಾಟ್ಯ ನಿಲಯಂನ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ,, ರಾತ್ರಿ ಭಜನಾ ಸಂಕೀರ್ತನೆ, ರಕ್ತೇಶ್ವರಿ ಮತ್ತು ಗುಳಿಗ ದೈವಗಳ ಭಂಡಾರ ಆಗಮನ, ಮಹಾಪೂಜೆ, ಬಲಿ ಉತ್ಸವ, ಮಧ್ಯರಾತ್ರಿ 12ಕ್ಕೆ ಬೆಡಿಸೇವೆ, ದರ್ಶನ ಬಲಿ, ಬಟ್ಟಲು ಕಾಣಿಕೆ ವಿಧಿ ವಿಧಾನಗಳು ನಡೆಯಿತು. ಬಳಿಕ ಕಲಾಸಂಗಮ ಶೇಡಿಕಾವು ಇವರಿಂದ ರಾಜೇಶ್ ಸಿ.ಎಚ್.ಮಧೂರು ವಿರಚಿತ ಮಾಲೆಸೇರಂದಿ ಮಲ್ಲಿಗೆ ತುಳು ಸಾಮಾಜಿಕ ನಾಟಕ ಪ್ರದರ್ಶನ ಜನಮನಸೂರೆಗೊಂಡಿತು. ಮಂಗಳವಾರ ಮುಂಜಾನೆ 4ಕ್ಕೆ ರಕ್ತೇಶ್ವರಿ ದೈವಗಳ ಕೋಲ, 6ಕ್ಕೆ ಗುಳಿಗ ದೈವದ ಕೋಲದೊಂದಿಗೆ ಉತ್ಸವ ಸಂಪನ್ನಗೊಂಡಿತು.