ಮತ ವಾಹನದ ಕಾಸರಗೋಡು ವಿಧಾನಸಭೆ ಕ್ಷೇತ್ರ ಮಟ್ಟದ ಪರ್ಯಟನೆ ಇಂದು ಆರಂಭ
0
ಮಾರ್ಚ್ 27, 2019
ಕಾಸರಗೋಡು: ಮತದಾನ ಜಾಗೃತಿ ಸಂಬಂಧ ಜಿಲ್ಲೆಯಲ್ಲಿ ಪರ್ಯಟನೆ ನಡೆಸುತ್ತಿರುವ ಮತವಾಹನದ ಕಾಸರಗೋಡು ವಿಧಾನಸಭೆ ಕ್ಷೇತ್ರ ಮಟ್ಟದ ಸಂಚಾರ ಇಂದು (ಮಾ.28)ರಂದು ಆರಂಭಗೊಳ್ಳಲಿದೆ.
ವಾಹನ ಮೂಲಕ ನೀಡಲಾಗುವ ಜಾಗೃತಿಯನ್ನು ಗರಿಷ್ಠ ಮಟ್ಟದಲ್ಲಿ ಪಡೆದುಕೊಂಡು ಚುನಾವಣೆಯ ದಿನ ಜನ ಮತದಾನ ನಡೆಸುವಲ್ಲಿ ಉತ್ಸಾಹ ತೋರುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಮಂಜೇಶ್ವರ ವಿಧಾನಸಭೆ ಕ್ಷೇತ್ರ ಮಟ್ಟದ ಎಲ್ಲ ಗ್ರಾಮಗಳಲ್ಲೂ ಪರ್ಯಟನೆ ನಡೆಸಿರುವ ಮತವಾಹನ ಅಲ್ಲಿನ ಸಂಚಾರ ಪೂರ್ಣಗೊಳಿಸಿದೆ. ವಿವಿಪಾಟ್ ಯಂತ್ರದ ಚಟುವಟಿಕೆಗಳ ಕುರಿತು ಪ್ರಧಾನವಾಗಿ ಈ ಮತಯಂತ್ರದಲ್ಲಿ ಮಾಹಿತಿ ನೀಡಲಾಗುತ್ತದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಮತಗಟ್ಟೆಗಳಲ್ಲೂ ಮತಯಂತ್ರ ಬಳಸಿ ಮತದಾನ ನಡೆಯುತ್ತಿದೆ. 1998ರಿಂದ ಮತಯಂತ್ರ ಬಳಕೆ ಆರಂಭಗೊಂಡಿದೆ.