ನವೀಕೃತ ಅಂಗನವಾಡಿ ಉದ್ಘಾಟನೆ
0
ಮಾರ್ಚ್ 30, 2019
ಕಾಸರಗೋಡು: ಕಾಸರಗೋಡು ಡ್ರೀಂ ಜೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ಇಂಟಿರಿಯರ್ ಆರ್ಕಿಟೆಕ್ಚರ್ ಮಾಸ್ಟರ್ ಡಿಪೆÇ್ಲೀಮಾ ವಿದ್ಯಾರ್ಥಿಗಳ ಸಾಮೂಹಿಕ ಯೋಜನೆಯ ಅಂಗವಾಗಿ ಕಾಸರಗೋಡು ನಗರಸ`Éಯ 20 ನೇ ವಾರ್ಡ್ ಅಂಗನವಾಡಿಯನ್ನು ನವೀಕರಿಸಿ ಉದ್ಘಾಟಿಸಲಾಯಿತು.
ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಬಿಜು ಪಿ. ಉದ್ಘಾಟಿಸಿದರು. ವಾರ್ಡ್ ಕೌನ್ಸಿಲರ್ ರಾಶೀದ್ ಪೂರ್ಣಂ ಅಧ್ಯಕ್ಷತೆ ವಹಿಸಿದರು. ಡ್ರೀಂ ಜೋನ್ ಸೆಂಟರ್ ಹೆಡ್ ಸಿಐಎ ಸಲಾಂ ಮುಖ್ಯ್ಯತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ರೋಶನ್ ಟೀಚರ್, ಸುಹರಾ ಟೀಚರ್, ನೌಶಾದ್ ಕರಿಪೆÇ್ಪೀಡಿ, ಅನ್‍ಸ್ವಾಬ್ ರೋಸ್, ಮಿಸಿರಿಯ, ಅಹಮ್ಮದ್ ಹಾಜಿ, ಅಶ್ರಫ್, ಮುಸ್ತಫಾ ಅಹಮ್ಮದ್, ಸೆಬಿನಾ ಟೀಚರ್, ಮಾಲತಿ ಮೊದಲಾದವರು ಶುಭಹಾರೈಸಿದರು. ಐಸಿಒಎಸ್ ಮಣಿಯಮ್ಮ ಸ್ವಾಗತಿಸಿ, ಅಲ್ತಾಫ ಪೌವ್ವಲ್ ವಂದಿಸಿದರು.