ಶೆಟ್ಟಿಬೈಲ್ ಪರಿಶಿಷ್ಟ ಜಾತಿ ಕಾಲೊನಿ ಸಮುದಾಯ ಭವನ ಉದ್ಘಾಟನೆ
0
ಮಾರ್ಚ್ 02, 2019
ಪೆರ್ಲ: ಎಣ್ಮಕಜೆ ಪಂಚಾಯಿತಿ ಪೆರ್ಲ ಶೆಟ್ಟಿಬೈಲು ಪರಿಶಿಷ್ಟ ಜಾತಿ ಕಾಲೊನಿಗೆ 2014-15ರ ಜಿಲ್ಲಾ ಪಂಚಾಯಿತಿ ಅನುದಾನದಿಂದ ನಿರ್ಮಿಸಲಾದ ಪರಿಶಿಷ್ಟ ಜಾತಿ ಸಮುದಾಯ ಭವನವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಷೀರ್ ಶುಕ್ರವಾರ ಸಂಜೆ ಉದ್ಘಾಟಿಸಿದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಅಧ್ಯಕ್ಷತೆ ವಹಿಸಿದ್ದರು.ಗ್ರಾಪಂ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಸದಸ್ಯರುಗಳಾದ ಹನೀಫ್ ನಡುಬೈಲ್, ಸಿದ್ದಿಕ್ ವಳಮೊಗರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ರೈ ಮಾಸ್ತರ್, ಜಿಲ್ಲಾ ಪರಿಶಿಷ್ಟ ಜಾತಿ ಇಲಾಖೆ ಉಪನಿರ್ದೇಶಕ ಸಮಿತಿ ಸದಸ್ಯ ಸದಾನಂದ ಶೇಣಿ ಶುಭ ಹಾರೈಸಿದರು.ಕುಟುಂಬಶ್ರೀ ಸಿಡಿಎಸ್ ಸದಸ್ಯೆ ಉದಯ ಕುಮಾರಿ ಸ್ವಾಗತಿಸಿ, ಗ್ರಾ.ಪಂ.ಪ.ಜಾತಿ ಯೋಜನಾ ಸಂಯೋಜಕ ಶಶಿಧರ ವಂದಿಸಿದರು.