ಭದ್ರಾವತಿಯಲ್ಲಿ ಎಂ.ಉಮೇಶ ಸಾಲ್ಯಾನ್ ರಿಗೆ ಸನ್ಮಾನ
0
ಮಾರ್ಚ್ 05, 2019
ಕಾಸರಗೋಡು: ಶಿವಮೊಗ್ಗದ ಭದ್ರಾವತಿಯ ಬಸವೇಶ್ವರ ಸಭಾಭವನದಲ್ಲಿ ರಂಗ ಸುಹಾಸ ಟ್ರಸ್ಟ್, ಸಾಣೇಹಳ್ಳಿ ಶಾಂತಲಾ ಕಲಾವೇದಿಕೆ ಹಾಗೂ ಬಸವೇಶ್ವರ ಧರ್ಮಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಖ್ಯಾತ ರಂಗ ನಿರ್ದೇಶಕ ಎಸ್.ಜಿ.ಶಂಕರಮೂರ್ತಿ ರಚಿಸಿದ ಏಳು ನಾಟಕಗಳ ಕೃತಿ ರಂಗಗೊಂಚಲು ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಈ ಸಂದರ್ಭ ಕೇರಳ ತುಳು ಅಕಾಡೆಮಿ ಅಧ್ಯಕ್ಷ, ರಂಗ ನಿರ್ದೇಶಕ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಸಮಾರಂಭವನ್ನು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಉದ್ಘಾಟಿಸಿ ಕೃತಿ ಲೋಕಾರ್ಪಣೆಗೊಳಿಸಿದರು. ಸಾಹಿತಿ ಚಟ್ನಹಳ್ಳಿ ಮಹೇಶ್, ರಂಗಕಲಾವಿದ ಪ.ವಿ.ಸುಬ್ರಹ್ಮಣ್ಯ ಮಧುಗಿರಿ, ರಂಗಕರ್ಮಿ ಬಿ.ಬಿ.ಎಂ.ಮಹಾಮನೆ, ಪದ ದೇವರಾಜ್, ಎಸ್.ಜಿ.ಶಂಕರಮೂರ್ತಿ, ಡಾ.ಬಿ.ಜಿ.ಧನಂಜಯ, ಅಂತರಾಷ್ಟ್ರೀಯ ಹಾಕಿ ತರಬೇತುದಾರ ಪಿ.ಎ.ಪ್ರಭುಕುಮಾರ್ ಕೊಡಗು, ಎಸ್.ಎನ್.ವೀರಭದ್ರಯ್ಯ, ಯಶೋಧಾ, ಡಾ.ವೀರಭದ್ರಪ್ಪ, ಅನ್ನಪೂರ್ಣ ಎಸ್.ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೆ.ಮಲ್ಲಯ್ಯ ಶ್ರೀಮಠ ಹಾಗೂ ಪೂಜಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಂತಲಾ ಕಲಾವೇದಿಕೆಯ ಕಲಾವಿದರು ಈ-ಸೂರಿನ ಈ-ಶೂರರು ನಾಟಕ ಪ್ರದರ್ಶಿಸಿದರು.