ಯಕ್ಷಗಾನ ತಾಳಮದ್ದಳೆ, ಸಮ್ಮಾನ ಸಮಾರಂಭ
0
ಮಾರ್ಚ್ 06, 2019
ಮಂಜೇಶ್ವರ: ಬಲ್ಲಂಗುಡೇಲು ಶ್ರೀ ಪಾಡಂಗರೇ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ ಅವರ 43 ನೇ ವರ್ಷದ ಸೇವೆ ರೂಪದ ಯಕ್ಷಗಾನ ತಾಳಮದ್ದಲೆ ಕ್ಷೇತ್ರದ ವಠಾರದಲ್ಲಿ ಜರಗಿತು.
ಯಕ್ಷಗಾನ ತಾಳಮದ್ದಳೆಯ ಮೊದಲು ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ ಶೇಖರ ಸೊೈಪಕಲ್ಲು, ಕೆ.ಜಯರಾಮ ಬಲ್ಲಂಗುಡೇಲು, ಬಶೀರ್ ಝುಮ್ ಝುಮ್ ಮೂಡಂಬೈಲ್ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಮ್ ಪ್ರಕಾಶ್ ಆಳ್ವ ಪಟ್ಟತಮೊಗರು, ಅಶ್ವಥ್ ಪೂಜಾರಿ ಲಾಲ್‍ಭಾಗ್, ಚಂದ್ರಹಾಸ ಆಳ್ವ ಕೊಡ್ಡೆ, ಸುಕುಮಾರ ಶೆಟ್ಟಿ ಕಂಗುಮೆ, ಹರಿಜೀವನ್ ದಾಸ್ ನೀರಹಳ್ಳಿ, ರಮೇಶ್ ಸುವರ್ಣ ಮಜ್ಜೆಲ್, ಮುತ್ತು ಶೆಟ್ಟಿ ಬಾಳ್ಯೂರು, ರವೀಂದ್ರ ಶೆಟ್ಟಿ ಕರಿಬೈಲ್, ಕಾರ್ತಿಕ್ ಶೆಟ್ಟಿ ಮಜಿಬೈಲ್, ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಉಪಸ್ಥಿತರಿದ್ದರು. ಅರವಿಂದಾಕ್ಷ ಭಂಡಾರಿ ದಡ್ಡಂಗಡಿ ಕಾರ್ಯಕ್ರಮ ನಿರೂಪಿಸಿದರು. ಭಾಗವತರಾಗಿ ಮುರಳಿಕೃಷ್ಣ ಶಾಸ್ತ್ರಿ, ಶುಭಾನಂದ ಶೆಟ್ಟಿ ಕುಳೂರು, ಧೀರಜ್ ರೈ ಸಂಪಾಜೆ, ಚೆಂಡೆ ಮದ್ದಳೆಯಲ್ಲಿ ಚಿಪ್ಪಾರ್ ರಾಜರಾಮ ಬಲ್ಲಾಳ, ವಾಸುದೇವ ಮಯ್ಯ ವರ್ಕಾಡಿ, ಅರ್ಥಧಾರಿಗಳಾಗಿ ವಿನಯ್ ಆಚಾರ್ಯ ಸುರತ್ಕಲ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ರಮೇಶ್ ಶೆಟ್ಟಿ ಕುಂಜತ್ತೂರು, ದಾಮೋದರ ಶೆಟ್ಟಿ ಮಜಿಬೈಲ್ ಭಾಗವಹಿಸಿದ್ದರು. ದಾಮೋದರ ಶೆಟ್ಟಿ ಮಜಿಬೈಲ್ ಸ್ವಾಗತಿಸಿ, ವಂದಿಸಿದರು.