ಸಾನ್ನಿದ್ಯ ವೃದ್ದಿಗೆ ಯೋಗಾಚಾರ್ಯರಿಮದ ಅಖಂಡ ಮೌನಜಪ
0
ಮಾರ್ಚ್ 05, 2019
ಮಂಜೇಶ್ವರ: ಪಾವೂರು ಸಮೀಪದ ಕೊಪ್ಪಳ ಶಿವಪುರದಲ್ಲಿ ಶಿಥಿಲಾವಸ್ಥೆಯಲ್ಲಿದ್ದು, ಕಳೆದ 11 ವರ್ಷಗಳ ಹಿಂದೆ ಅನ್ಯಧರ್ಮೀಯರ ಆಕ್ರಮಣ ಮತ್ತು ಅವರಿಂದ ಕದಿಯಲ್ಪಟ್ಟ ಶ್ರೀಮಹಾಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶ್ರೀಸಾನ್ನಿದ್ಯದ ಶಕ್ತಿವೃದ್ದಿಗೆ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಸೋಮವಾರದಿಂದ 48 ದಿನಗಳ ಒಂದು ಮಂಡಲ ಉದಯಾಸ್ತಮಾನ ಮೌನ ನಾಮಜಪಕ್ಕೆ ತೊಡಗಿಕೊಂಡರು.
ಇದರ ಪೂರ್ವಭಾವಿಯಾಗಿ ಭಾನುವಾರ ವರ್ಕಾಡಿಯ ನೀರೊಳಿಕೆಯ ಶ್ರೀಮಾತಾ ಸೇವಾಶ್ರಮದಿಂದ ವರ್ಕಾಡಿ ಬೇಕರಿ ಮಾರ್ಗವಾಗಿ ಪಾವೂರು ಮೂಲಕ ಶಿವಪುರ ಶ್ರೀಕ್ಷೇತ್ರಕ್ಕೆ ಪುಂಡರೀಕಾಕ್ಷ ಅವರನ್ನು ಮೆರವಣಿಗೆಯೊಂದಿಗೆ ಕರೆತರಲಾಯಿತು. ಬಳಿಕ ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೃತ್ಯುಂಜಯೇಶ್ವರ ಸೇವಾ ಮಂದಿರದಲ್ಲಿ ವಾಸ್ತುಪೂಜೆ ಸಹಿತ ವಿವಿಧ ವೈದಿಕ ಕಾಯ್ಕ್ರಮಗಳು ನಡೆದವು.
ಈ ಸಂದರ್ಭ ಸಭಾ ಕಾರ್ಯಕ್ರಮದಲ್ಲಿ ಶ್ರೀಧರ ಶೆಟ್ಟಿ ಪಾವೂರುಗುತ್ತು, ಎಂ.ಬಿ.ಪುರಾಣಿಕ್, ಗೋಪಾಲ ಶೆಟ್ಟಿ ಅರಿಬೈಲು, ನಾರಾಯಣ ಭಟ್ ತಲೆಂಗಳ, ಸುರೇಶ್ ಶೆಟ್ಟಿ ಪರಂಕಿಲ, ಸುಬ್ಬ ಗುರುಸ್ವಾಮಿ ಪಾವೂರು, ಯಾದವ ಮಂಜೇಶ್ವರ, ಶೈಲೇಶ್ ಅಂಜರೆ,ಸೇಸಪ್ಪ ಅರಿಂಗುಳ, ಐತ್ತಪ್ಪ ಶೆಟ್ಟಿ ದೇವಂದಪಡ್ಪು, ತ್ಯಾಂಪಣ್ಣ ರೈ ಪಾವೂರು, ಎವರೆಸ್ಟ್ ಡಿಸೋಜ ಪಾಲೆತ್ತಡಿ, ಬಾಲಕೃಷ್ಣ ಶೆಟ್ಟಿ ಮುಗೇರುಗುತ್ತು, ಆನಂದ ಟಿ.ತಚ್ಚಿರೆ, ಕುಶಾಲಾಕ್ಷಿ ಕಾನದಕಟ್ಟ, ಬೇಬಿ ಕೊಪ್ಪಳ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿವಿಧ ಸಂಗಗಳ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಸದಸ್ಯರುಗಳು, ಸ್ಥಳೀಯರು ಉಪಸ್ಥಿತರಿದ್ದರು.
ಮಹಾಮೃತ್ಯುಂಜ ಕ್ಷೇತ್ರವು ದಶಕಗಳಿಂದ ಜೀರ್ಣಾವಸ್ಥೆಗೆ ತಲಪಿ ಬಳಿಕ ಅನ್ಯಧರ್ಮೀಯರ ಪಾಲಾಗಿತ್ತು. ಕಳೆದ 11 ವರ್ಷಗಳ ಹಿಮದೆ ಇಲ್ಲಿಯ ಗುಡ್ಡದ ಮೇಲಿದ್ದ ಅನಾಥ ಶಿವಲಿಂಗವನ್ನು ಕಿತ್ತೆಸೆದು ಅಪವಿತ್ರಗೊಳಿಸಲಾಗಿತ್ತು. ಈ ಸಂದರ್ಭ ಎಚ್ಚೆತ್ತ ಸ್ಥಳೀಯ ನಾಗರಿಕರು ಬಳಿಕ ಒಗ್ಗಟ್ಟಾಗಿ ನ್ಯಾಯಾಲಯದ ಮೊರೆಹೋಗಿದ್ದರು. ಈ ಬಗ್ಗೆ ಕೂಲಂಕುಶ ವಿಚಾರಣೆ ನಡೆಸಿದ ನ್ಯಾಯಾಲಯ ಬಳಿಕ ದೇವಾಲಯವಿದ್ದ ಪ್ರದೇಶವನ್ನು ವಿವಾದಿತ ಹಾಗೂ ನಿಬರ್ಂಂಧಿತ ಪ್ರದೇಶ ಎಂದು ಘೋಷಿಸಿ ಪೋಲೀಸ್ ಸರ್ಪಗಾವಲು ಏರ್ಪಡಿಸಿತ್ತು. ಆ ಬಳಿಕ ನ್ಯಾಯಾಲಯದ ನಿರ್ದೇಶಾನುಸಾರ ಪೂಜೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಶ್ರೀಕ್ಷೇತ್ರದ ಅಭಿವೃದ್ದಿಗೆ ಈವರೆಗೆ ಸಾಧ್ಯವಾಗದಿರುವುದರಿಂದ ಸಾನ್ನಿಧ್ಯ ವೃದ್ದಿಗಾಗಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಅಖಂಡ ಮೌನ ಜಪಕ್ಕೆ ಸೋಮವಾರದ ಮಹಾ ಶಿವರಾತ್ರಿಯ ಪರ್ವ ಕಾಲದಲ್ಲಿ ತೊಡಗಿಸಿಕೊಂಡರು. ಜೊತೆಗೆ ಸ್ಥಳೀಯರ ಭಕ್ತರು ಶಿವ ಪಂಚಾಕ್ಷರಿ ಪಾರಾಯಣಕ್ಕೂ ಈ ಸಂದರ್ಭ ಚಾಲನೆ ನೀಡಲಾಗಿದೆ.