ಖಾಸಗಿ ಪಂಪಿಂಗ್ ನಿಷೇಧ
0
ಮಾರ್ಚ್ 30, 2019
ಕಾಸರಗೋಡು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಲಾಗುವ ಜಲಾಶಯಗಳ ಸಾಲಿನಲ್ಲಿ ಸೇರುವ ನದಿಗಳಿಂದ, ಕುಡಿಯುವ ನೀರಿಗಾಗಿ ಪಂಪಿಂಗ್ ನಡೆಸುವ ಸರಕಾರಿ ಪಂಪ್ ಹೌಸ್ ಗಳಿಂದ ಎರಡೂ ಬದಿಗಳಲ್ಲಿ ಕುಡಿಯುವ ನೀರಿಗಾಗಿ ಖಾಸಗಿ ಪಂಪಿಂಗ್ ನಡೆಸುವ ಕ್ರಮವನ್ನು ಮೇ 31 ವರೆಗೆ ನಿಷೇಧಿಸಲಾಗಿದೆ.
ಜೊತೆಗೆ ಪಯಸ್ವಿನಿ ನದಿಯ ಪಾಂಡಿಕಂಡಂ ರಿಸರ್ವೇಯರ್ ನಿಂದ ಆಲೂರು ತಡೆಗೋಡೆ ವರೆಗಿನ ಪ್ರದೇಶಗಳ ಎಲ್ಲ ಖಾಸಗಿ ಪಂಪಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕುಡಿಯುವ ನೀರಿಗೆ ಬಳಸಲಾಗುವ ಜಲಾಶಯಗಳ ಸಾಲಿನ ನದಿಗಳು ಇರುವ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು, ಸಂಬಂಧಪಟ್ಟ ಕೃಷಿ ದಿಕಾರಿಗಳು, ವಿದ್ಯುತ್ ಇಲಾಖೆ ಸಿಬ್ಬಂದಿ, ಕಿರು ನೀರಾವರಿ , ಪ್ರಧಾನ ನೀರಾವರಿ ಸಿಬ್ಬಂದಿ ವಿಭಾಗ ಸಿಬ್ಬಂದಿ ಮೊದಲಾದವರು ಈ ಆದೇಶ ಪಾಲನೆಗೆ ಬೆಕಾದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.