ಮಾನ್ಯ ಜ್ಞಾನೋದಯ ಶಾಲಾ ವಾರ್ಷಿಕೋತ್ಸವ
0
ಮಾರ್ಚ್ 02, 2019
ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯದ ಜ್ಞಾನೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ, ಕಂಪ್ಯೂಟರ್ ಮತ್ತು ವಿಜ್ಞಾನ ಪಾರ್ಕ್‍ಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯ ಗೋವಿಂದನ್ ನಂಬೂದಿರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸಿದರು. ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಶಾಲಾ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಶಂಕರ ಸಿ.ಎಚ್, ಉಪಾಧ್ಯಕ್ಷ ಸತೀಶ, ಸುಬೈರ್, ಬ್ಲಾಕ್ ಯೋಜನಾಧಿಕಾರಿ ಕುಞÂಕೃಷ್ಣನ್, ಶಾಲಾ ಪ್ರಬಂಧಕಿ ಜಯಂತಿ ಕೃಷ್ಣ ಮೂರ್ತಿ, ರವೀಂದ್ರ ಮಾಸ್ತರ್ ಮುಂತಾದವರು ಶುಭಾಸಂಶನೆಗೈದರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ರೆಜು ಎಸ್.ಎಸ್ ಸ್ವಾಗತಿಸಿ, ಎಸ್ ಆರ್ ಜಿ ಸಂಚಾಲಕ ಸುರೇಂದ್ರನ್ ಎಂ.ವಿ ವಂದಿಸಿದರು. ಕೆ.ಜಿ.ಎಂ.ಒ ಪ್ರಶಸ್ತಿ ವಿಜೇತ ಡಾ.ಜನಾರ್ಧನ್ ನಾಯ್ಕ್ ರವರನ್ನು ಶಾಲು ಹಾಗು ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಸಂಜೆ ನಡೆದ ಶಾಲಾ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ಹಾಗೂ ಸಾಬೂನು ತಯಾರಿಯ ಘಟಕವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ಯಾಮ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್, ಮುಖ್ಯೋಪಾಧ್ಯಾಯ ಟಿ.ಗೋವಿಂದನ್ ನಂಬೂದಿರಿ, ಆಶಾ ಕಿರಣ್ ಟೀಚರ್, ಮಾತೃಸಂಘದ ಅಧ್ಯಕ್ಷೆ ಎಲಿಸಾ ಡಿಸೋಜ,ಪ್ರಬಂಧಕಿ ಜಯಂತಿ ಕೃಷ್ಣಮೂರ್ತಿ, ಎಂ ಎ ರವೀಂದ್ರ ಮಾಸ್ತರ್ ಮೊದಲಾದವರು ಮಾತಾಡಿದರು. ಕಾರ್ಯಕ್ರಮದಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸ ಮೂರ್ತಿ, ರೈತ ಪ್ರಶಸ್ತಿ ವಿಜೇತ ಮೊಹಮ್ಮದ್ ಮುಬಶೀರ್ ಮೊದಲಾದವರನ್ನು ಸನ್ಮಾನಿಸಲಾಯಿತು.ಈಜು ತರಬೇತಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ರಾಜ್ ಬಾಲಕೃಷ್ಣನ್ ಪ್ರಮಾಣ ಪತ್ರಗಳನ್ನು ವಿತರಿಸಿದರು.ಕೃಷ್ಣ ಮಾಸ್ತರ್ ಸ್ವಾಗತಿಸಿ, ರಾಧಾಮಣಿ ಟೀಚರ್ ವಂದಿಸಿದರು.