HEALTH TIPS

ಮುಂದುವರಿಯುತ್ತಿರುವ ಮೌನ ನಾಮಜಪ-ಸಾನಿಧ್ಯ ವೃದ್ದಿಗೆ ಪಣತೊಟ್ಟ ಭಕ್ತ ಸಮೂಹ

ಮಂಜೇಶ್ವರ: ಪಾವೂರು ಕೊಪ್ಪಳದ ಶಿವಪುರ ಶ್ರೀಮಹಾ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾರ್ಚ್ 4 ಸೊಮವಾರದಿಂದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರಿಂದ 48 ದಿವಸಗಳ ಉದಯಾಸ್ತಮಾನ ಮೌನ ನಾಮಜಫ ವ್ರತಾನುಷ್ಠಾನರಾಗಿದ್ದು, ಮಂಗಳವಾರ ಬೆಳಿಗ್ಗೆ ಗಣಪತಿ ಹವನ ನಂತರ ಪುಂಡರೀಕಾಕ್ಷ ಯೋಗಾಚಾರ್ಯರವರಿಂದ ಮೌನ ನಾಮ ಜಪ ಮುಂದುವರಿಯಿತು. ಈ ಸಂದರ್ಭ ಸಾವಿರ ಸಂಖ್ಯೆಯಲ್ಲಿ ಭಕ್ತರು ನಾಮ ಜಪ ಮಾಡಿದರು. ಸಂಜೆ ಶ್ರೀಚಾಮುಂಡೇಶ್ವರಿ ಮಹಿಳಾ ಭಜನಾ ಮಂಡಳಿಯವರು ಭಜನಾ ಸಂಕೀರ್ತನೆ ನಡೆಸಿದರು. ಸಂಜೆ 6.30 ಕ್ಕೆ ಪುಂಡರೀಕಾಕ್ಷರಿಂದ ಸತ್ಸಂಗ ನಡೆಯಿತು. ಈ ಸಂದರ್ಭದಲ್ಲಿ ಅಥಿತಿಯಾಗಿ ವರ್ಕಾಡಿ ಕಾವೀ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ಅಧ್ಯಕ್ಷ ಪ್ರಭಾಕರ ರೈ ವರ್ಕಾಡಿ ಮಾತನಾದರು. ಮುಖಂಡರಾದ ಗೋಪಾಲ ಶೆಟ್ಟಿ ಅರಿಬೈಲು, ಸಂಜೀವ ಶೆಟ್ಟಿ ಮಾಡ, ಶ್ರೀಧರ ಶೆಟ್ಟಿ ಪಾವೂರು ಉಪಸ್ಥಿತರಿದ್ದರು. ಸೋಮವಾರ ಬೆಳಿಗ್ಗೆ ಗಣಪತಿ ಹವನ, ಪುಂಡರೀಕಾಕ್ಷ ಅವರಿಂದ ಮೌನವ್ರತ, ಭಕ್ತಾದಿಗಳಿಂದ 2 ಲಕ್ಷ ನಾಮಜಪ, ಸಂಜೆ ಶ್ರೀದುರ್ಗಾಪರಮೇಶ್ವರಿ ಭಜನಾಮಂಡಳಿ ಸುಂಕದಕಟ್ಟೆ ವರ್ಕಾಡಿ ತಂಡದಿಂದ ಭಜನಾ ಸಂಕೀರ್ತನೆ, ಸತ್ಸಂಗ ನೆರವೇರಿತು. ಈ ಸಂದರ್ಭ ಡಾ.ಕೆ.ಎಸ್.ಶಂಕರ ಹೊಳ್ಳ ಕೋಡಿ.ವರ್ಕಾಡಿ, ಸುಬ್ಬ ಗುರುಸ್ವಾಮಿ, ಗೋಪಾಲ ಶೆಟ್ಟಿ ಅರಿಬೈಲು, ಲಕ್ಷ್ಮೀನಾರಾಯಣ ಭಟ್ ಕೋಳ್ಯೂರು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries