ಸ್ಫೋಟಕ ಸುದ್ದಿ: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಸಾವು?
0
ಮಾರ್ಚ್ 03, 2019
ರಾವಲ್ಪಿಂಡಿ: ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.
ಒಂದು ವೇಳೆ ಇದು ನಿಜವೇ ಆಗಿದ್ದರೆ ಭಾರತದ ಮಟ್ಟಿಗೆ ಶುಭ ಸುದ್ಧಿಯಾಗಲಿದೆ. ಮೂತ್ರ ಪಿಂಡ ತೀವ್ರ ವೈಫಲ್ಯದಿಂದ ಬಳಲುತ್ತಿದ್ದ ಜೈಷ್ ಮುಖ್ಯಸ್ಥ ಮತ್ತು ಪುಲ್ವಾಮಾ ದಾಳಿ ರೂವಾರಿ ಅಜರ್ ಪಾಕಿಸ್ತಾನದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪಾಕ್ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು.
ಇದೇ ಮೊದಲ ಬಾರಿಗೆ ಪಾಕಿಸ್ತಾನ ಬಹಿರಂಗವಾಗಿ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇರುವುದಾಗಿ ಹಾಗೂ ಆತ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿಕೊಂಡಿತ್ತು. ಇನ್ನು ಮಸೂದ್ ಅಜರನ್ ನನ್ನು ಉಳಿಸಿಕೊಳ್ಳಲು ಕುತಂತ್ರಿ ಪಾಕ್ ಮತ್ತೊಂದು ನಾಟಕ ಶುರು ಮಾಡಿಕೊಂಡಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಸಂಘಟನೆಯ ಸ್ಥಾಪಕನಾಗಿದ್ದ ಮಸೂದ್ ಅಜರ್ ಸಾವಿನ ವಿಚಾರ ಖಚಿತವಾಗಬೇಕಿದೆ. ಇನ್ನು ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿನ ಉಗ್ರರ ಕ್ಯಾಂಪ್ ಗಳ ಮೇಲಿನ ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ನಲ್ಲಿ ಮಸೂದ್ ಅಜರ್ ಗಾಯಗೊಂಡಿದ್ದ ಆತನನ್ನು ಪಾಕಿಸ್ತಾನ ರಹಸ್ಯವಾಗಿ ಸೇನಾಸ್ಪತ್ರೆಗೆ ದಾಖಲಿಸಿತ್ತು. ಆದರೆ ಸ್ಥಳೀಯರಿಗೆ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ರಹಸ್ಯವನ್ನು ಪಾಕ್ ಸರ್ಕಾರ ಮರೆಮಾಡಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.