ವರ್ಕಾಡಿ ನೂತನ ಸ್ಮಾರ್ಟ್ ಗ್ರಾಮ ಕಚೇರಿ ಕಟ್ಟಡ ಉದ್ಘಾಟನೆ
0
ಮಾರ್ಚ್ 02, 2019
ನೂತನ ತಾಂತ್ರಿಕತೆಯ ಸೇವೆ ಒದಗಿಸಿ ಕಚೇರಿಗಳನ್ನು ಜನಸೌಹಾರ್ದ ಕೇಂದ್ರಗಳಾಗಿಸಲು ಕ್ರಮ ಆರಂಭ: ಸಚಿವ ಚಂದ್ರಶೇಖರನ್
ಮಂಜೇಶ್ವರ: ಸಾರ್ವಜನಿಕರಿಗೆ ನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಸೇವೆ ಒದಗಿಸಿ ಕಚೇರಿಗಳನ್ನು ಜನಸೌಹಾರ್ದ ಕೇಂದ್ರಗಳಾಗಿಸುವ ಕ್ರಮವನ್ನು ರಾಜ್ಯ ಸರಕಾರ ಈಗಾಗಲೇ ಆರಂಭಿಸಿದೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಗಡಿ ಗ್ರಾಮ ವರ್ಕಾಡಿಯಲ್ಲಿ ಸ್ಮಾರ್ಟ್ ಗ್ರಾಮ ಕಚೇರಿಗಾಗಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧಾರಣ ಜತೆಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮಕಚೇರಿಗಳನ್ನು ಅತ್ಯಾಧುನಿಕ ಸೌಲಭ್ಯಗಳ ಸಹಿತ ಬದಲಿಸಬೇಕಾದುದು ಈ ಕಾಲಾವಧಿಯ ಅನಿವಾರ್ಯತೆ. ಅಲ್ಪ ಕಾಲಾವಧಿಯಲ್ಲಿ ರಾಜ್ಯ 39 ಗ್ರಾಮಕಚೇರಿಗಳು ಅತ್ಯಾಧುನಿಕ ರೀತಿಯ ಸ್ಮಾರ್ಟ್ ಕಚೇರಿಗಳಾಗಿ ಬದಲಾದುದು ಸರಕಾರದ ಯಶಸ್ಸಾಗಿದೆ. ದಯನೀಯ ಸ್ಥಿತಿಯ ಕಟ್ಟಡಗಳಲ್ಲಿ ಗ್ರಾಮಕಚೇರಿಗಳು ಸೀಮಿತಗೊಳ್ಳುವ ಕಾಲ ಕಳೆದುಹೋಯಿತು ಎಂದವರು ತಿಳಿಸಿದರು.
ವರ್ಕಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಪಿ.ಎಂ.ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ತಹಶೀಲ್ದಾರ್ ಜೋನ್ ವರ್ಗೀಸ್, ಹೌಸಿಂಗ್ ಬೋಡ್ರ್ಸ್ ಸಹಾಯಕ ಕಾರ್ಯಕಾರಿ ಅಭಿಯಂತರ ಪಿ.ಪಿ.ಯೂಸುಫ್, ಗ್ರಾಮಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ತುಳಸೀಕುಮಾರಿ, ರಹಮತ್ ರಝಾಕ್, ವಾರ್ಡ್ ಸದಸ್ಯರಾದ ಸದಾಶಿವ ನಾಯಕ್, ಪಿ.ಹ್ಯಾರಿಸ್, ಪೂರ್ಣಿಮಾ, ಪಿ.ವಸಂತ, ಟಿ.ಆನಂದ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.