ನರೇಂದ್ರ ಮೋದಿ ಮತ್ತೆ ಪ್ರಧಾನಿ ನಾಡಿನ ಅವಶ್ಯಕತೆ -ರವೀಶ ತಂತ್ರಿ
0
ಮಾರ್ಚ್ 03, 2019
ಮಂಜೇಶ್ವರ: ನರೇಂದ್ರ ಮೋದಿಯ ಆಡಳಿತ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ, ನಾಡಿನ ಅಭಿವೃದ್ಧಿಗಾಗಿ ನಿರಂತರ ಕಾರ್ಯನಿರ್ವಹಿಸಿ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಮೋದಿಯ ಆಡಳಿತದಿಂದ ವಿರೋದಿಗಳೆಲ್ಲ ಒಂದಾಗಿ ಪ್ರಯತ್ನಿಸುತ್ತಿರುವ ಘಟಬಂಧನ ದೇಶದಲ್ಲಿ ನಗೇ ಪಾಟಲಿಗೀಡಾಗಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕುಂಟಾರು ರವೀಶ ತಂತ್ರಿ ಹೇಳಿದರು.
ಯುವಮೋರ್ಚಾ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಭಾನುವಾರ ನಡೆದ ವಿಜಯ ಸಂಕಲ್ಪ ಬೈಕ್ ಜಾಥಾ ಸಮಾರೋಪ ಸಮಾರಂಭವನ್ನು ಮಜೀರ್ಪಳ್ಳದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಚಂದ್ರಕಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿಗಳಾದ ಮುರಳೀಧರ್ ಯಾದವ್, ಆದರ್ಶ್ ಬಿಎಂ, ಸುಮಿತ್ ಪೆರ್ಲ, ಪ್ರಜ್ಞವಿತ್ ಶೆಟ್ಟಿ, ವಿಜಯ್ ರೈ, ಧನರಾಜ್, ಸಂತೋಷ್ ದೈಗೊಳಿ, ಚಂದ್ರಶೇಖರ್ ಶೆಟ್ಟಿ, ಜಗದೀಶ್ ಚೆಂಡೆಲ್, ಹರಿಶ್ಚಂದ್ರ.ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಕ್ಷಣ್ ಅಡಕಳಕಟ್ಟೆ ಸ್ವಾಗತಿಸಿ, ಪುಷ್ಪರಾಜ್ ವಂದಿಸಿದರು.