HEALTH TIPS

ವಿದ್ಯಾಪೀಠದಲ್ಲಿ ಸ್ಪಂದನ ಬೀಳ್ಕೊಡುಗೆ ಕಾರ್ಯಕ್ರಮ

ಬದಿಯಡ್ಕ: ಅತ್ಯಧಿಕ ಅಂಕಗಳಿಸುವುದೊಂದೇ ಧ್ಯೇಯವಾಗಿರದೆ ಸರಳತೆ, ಸಭ್ಯತೆ, ಸ್ವಚ್ಛತೆ, ಪ್ರೀತಿ ಹಾಗೂ ನೀತಿಯೆಂಬ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದ ಗುರಿ ತಲುಪಬೇಕಾಗಿದೆ. ಈ ಕಾಲಘಟ್ಟದಲ್ಲಿ ಭಾವೀ ಜನಾಂಗಕ್ಕೆ ಇಂತಹ ಮೌಲ್ಯಯುತ ಶಿಕ್ಷಣವನ್ನು ನೀಡಬೇಕಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕ ವೆಂಕಟೇಶ್ವರ ಭಟ್ ಬೆಳ್ತಂಗಡಿ ಅಭಿಪ್ರಾಯಪಟ್ಟರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ನಡೆದ 2018-19ನೇ ಶೈಕ್ಷಣಿಕ ವರ್ಷದ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ `ಸ್ಪಂದನ'ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜ್ಞಾನಜ್ಯೋತಿಯ ಸಂಕೇತವಾಗಿ ಉರಿಯುತ್ತಿರುವ ದೀಪವನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ ಮಾರ್ಗದರ್ಶನ ನೀಡಿ ಮಾತನಾಡಿದರು. ಸಮಯದ ಸದುಪಯೋಗ, ತಂದೆ ತಾಯಂದಿರು ಹಾಗೂ ಅಧ್ಯಾಪಕ ವೃಂದದವರ ಹಿತನುಡಿಗಳ ಅನುಸರಣೆ, ಅಂತೆಯೇ ಬೆಳೆದುಬಂದ ಹಾದಿಯ ನೆನಪಿನ ಮೋದಕತೆ ಇವುಗಳನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡಿರಬೇಕು ಎಂದು ಹೇಳಿದ ಅವರು ಪೋಷಕರು, ಅಧ್ಯಾಪಕರು, ಆಡಳಿತ ಸದಸ್ಯರು ಹಾಗೂ ವಿದ್ಯಾರ್ಥಿಗಳೆಂಬ ನಾಲ್ಕು ಆಧಾರ ಸ್ಥಂಭಗಳ ಮೇಲೇ ವಿದ್ಯಾದೇಗುಲ ನೆಲೆನಿಂತಿದೆ ಎಂದರು. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಾಪಕಾಧ್ಯಕ್ಷರಾದ ಡಾ. ವೈ.ವಿ.ಕೃಷ್ಣಮೂರ್ತಿ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಪೈ, ಮಾತೃಸಮಿತಿಯ ಅಧ್ಯಕ್ಷೆ ಪ್ರಮೀಳಾ ಗೋಸಾಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕ ವೃಂದ ತಮ್ಮ ಮದಾಳದ ಬಿಚ್ಚುನುಡಿಗಳನ್ನು ಬಿತ್ತರಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ನೆನಪಿನ ಕಾಣಿಕೆಯನ್ನು ಜೊತೆಯಾಗಿ ಸಮರ್ಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮಾತನಾಡುತ್ತಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಂಬಂಧವನ್ನು ಗಟ್ಟಿಗೊಳಿಸುವ ಕಾರ್ಯಕ್ರಮ ಇದಾಗಿದ್ದು, ನಿಮಗಾಗಿ ನೀವು ಕಲಿತ ಈ ಶಾಲೆ ಸದಾ ತೆರೆದಿರುತ್ತದೆ ಎಂದು ಪ್ರಾಸ್ತಾವಿಕವಾಗಿ ನುಡಿದರು. 9ನೇ ತರಗತಿಯ ಅಪರ್ಣ ಪಿ. ಸ್ವಾಗತಿಸಿ, ಪ್ರತೀಕಾ ವಂದಿಸಿದರು. ಸಿಂಧುಶ್ರೀ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries