HEALTH TIPS

ಜನಮನ ಸೆಳೆದ ಹಸಿರೆನೆಡೆ ನಮ್ಮ ನಡೆ-ಏಕದಿನ ಶಿಬಿರ

ಮಂಜೇಶ್ವರ: ವಿದ್ಯಾರ್ಥಿಗಳು ಮತ್ತು ವಿದ್ಯಾಸಂಸ್ಥೆಗಳ ಸೃಜನಶೀಲ ಶಾಲೆ ಕಾರ್ಯಕ್ರಮದ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರದಲ್ಲಿ ಹಸಿರಿನೆಡೆ ನಮ್ಮ ನಡೆ ವಿನೂತನ ಏಕದಿನ ಶಿಬಿರ ಹಾಗೂ ಮಕ್ಕಳು ನಿರ್ಮಿಸಿದ ಉತ್ಪನ್ನಗಳ ಪ್ರದರ್ಶನ-ಮಾರಾಟ ಮೇಳ ಶನಿವಾರ ನಡೆಯಿತು. ಪ್ಲಾಸ್ಟಿಕ್ ಮುಕ್ತ ಶಾಲಾ ಪರಿಸರೆಂಬ ಯೋಜನೆಯೊಂದಿಗೆ ಕಾಗದದ ಬ್ಯಾಗ್‍ಗಳು, ಪೆನ್ನು, ಕಾಲೊರಸು, ಪುಸ್ತಕಗಳು, ಕಚೇರಿ ಫೈಲ್ ಗಳು, ಫಿನಾಯಿಲ್, ಸೋಪ್ ವಾಟರ್, ಫ್ರುಟ್ ಜಾಮ್, ಔಷಧೀಯ ಸಸ್ಯಗಳ ಮಹತ್ವದ ಕುರಿತಾದ ಮಾಹಿತಿ ಮೊದಲಾದವುಗಳ ಪ್ರದರ್ಶನ-ಮಾರಾಟ ಗಮನ ಸೆಳೆಯಿತು. ವಸ್ತು ಪ್ರದರ್ಶನ ಮಳಿಗೆಗೆ ಮಂಜೇಶ್ವರ ಬಿ.ಆರ್.ಸಿ.ಕ್ಷೇತ್ರ ನಿರೂಪಣಾಧಿಕಾರಿ ವಿಜಯಕುಮಾರ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಸಿರಿನೆಡೆ ನಮ್ಮ ನಡೆ ಎಂಬ ಕಿರು ಸಂಚಿಕೆಯನ್ನು ಈ ಸಂದರ್ಭ ಪತ್ರಕರ್ತ ಜಾನ್ ಡಿಸೋಜಾ ಬಿಡುಗಡೆಗೊಳಿಸಿದರು. ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಮಿತಿ ಹಾಗೂ ಸ್ಥಳೀಯರು ಮಕ್ಕಳ ಈ ಸಾಧನೆಗೆ ಬೆಂಬಲ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries