ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಜೊತೆ ವಾಘಾ ಗಡಿಯಿಂದ ಬಂದ ಮಹಿಳೆ ಯಾರು?
0
ಮಾರ್ಚ್ 02, 2019
ನವದೆಹಲಿ: ಅಭಿನಂದನ್ ಪಾಕ್ ನಿಂದ ಬಿಡುಗಡೆಯಾಗಿ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ವೀರ ಯೋಧನ ಆಗಮನದಿಂದ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದೆ.
ಪೈಲಟ್ ಅಭಿನಂದನ್ ಭಾರತಕ್ಕೆ ಮರಳುವ ವೇಳೆ ವಾಘಾ ಬಾರ್ಡರ್ ನಲ್ಲಿ ಅವರೊಂದಿಗಿದ್ದ ಆ ಮಹಿಳೆ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ.!
. ವಾಸ್ತವವಾಗಿ ಅವರು ಅಭಿನಂದನ್ ಪತ್ನಿ ಅಥವಾ ಕುಟುಂಬ ಸದಸ್ಯರಿರಬಹುದು ಎಂದು ಅಂದಾಜಿಸಿದರೆ ಅದು ಅಲ್ಲವೇ ಅಲ್ಲ! ಬದಲಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಭಾರತೀಯ ವ್ಯವಹಾರಗಳ ಇಲಾಖೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಫರಿಹಾ ಬುಗ್ತಿ. ವಿದೇಶಾಂಗ ಸಚಿವಾಲಯದಲ್ಲಿ ಫರಿಹಾ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳ ಉಸ್ತುವಾರಿಯಾಗಿದ್ದಾರೆ.