ಮತದಾನ ಹಕ್ಕಿನ ಮಹತ್ವ ತಿಳಿಸಲು ಬೈಕೇರಿದ ಜಿಲ್ಲಾಧಿಕಾರಿ
0
ಮಾರ್ಚ್ 27, 2019
ಕಾಸರಗೋಡು: ಮತದಾನ ಹಕ್ಕಿನ ಮಹತ್ವ ತಿಳಿಸಲು ಕಾಸರಗೋಡು ಜಿಲ್ಲಾಧಿಕಾರಿ ಬೈಕೇರಿ ಪರ್ಯಟನೆ ನಡೆಸಿದ್ದಾರೆ.
"ನನ್ನ ಮತದಾನ ನನ್ನ ಹಕ್ಕು" ಎಂಬ ಸಂದೇಶದೊಂದಿಗೆ ಚುನಾವಣೆ ಆಯೋಗದ ಪ್ರಚಾರ ವಿಭಾಗವಾಗಿರುವ ಸ್ವೀಪ್ ವತಿಯಿಂದ ಬೋವಿಕ್ಕಾನದಲ್ಲಿ ಬುಧವಾರ ನಡೆದ ಬುಲ್ಲೆಟ್ ಬೈಕ್ ರ್ಯಾಲಿ ನಡೆದಿದ್ದು, ಇದರ ಉದ್ಘಾಟನೆ ಹೊಣೆಹೊತ್ತಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬೈಕನ್ನ ಏರಿ ಸಂಚಾರ ನಡೆಸುವ ಮೂಲಕ ತಮ್ಮ ಕರ್ತವ್ಯ ನಡೆಸಿದ್ದಾರೆ.
ಸ್ವೀಪ್ ನೋಡೆಲ್ ಅಧಿಕಾರಿ ವಿ.ಮಹಮ್ಮದ್ ನೌಷಾದ್ ಮತದಾನದ ಸಂದೇಶ ನೀಡಿದರು. ಕಾಸರಗೋಡಿನ ವಿವಿಧ ಬೈಕ್ ರೈಡರ್ಸ್ ಕ್ಲಬ್ ಪ್ರತಿನಿಧಿಗಳಾದ 15 ಮಂದಿ ಸವಾರರು ಯಾತ್ರೆಯಲ್ಲಿ ಭಗವಹಿಸಿದರು. ಜಿಲ್ಲೆಯ ಮಲೆನಾಡ ಪ್ರದೇಶಗಲಲ್ಲಿ ಈ ರ್ಯಾಲಿ ನಡೆಯಿತು. ಕುತ್ತಿಕೋಲು, ಪನತ್ತಡಿ, ಮಾವುಂಗಾಲ್, ಕಾಞÂಂಗಾಡ್, ಮೇಲ್ಪರಬ, ಕಾಸರಗೋಡು ಪ್ರದೇಶಗಳಲ್ಲಿ ಮತದಾನ ಸಂದೇಶ ನೀಡಲಾಯಿತು.
ಸಹಕಾರಿ ಇನ್ಸ್ ಪೆಕ್ಟರ್ ರಾದ ಪಿ.ಬೈಜು ರಾಜ್, ಕೆ.ಸಿ.ಸತೀಶ್ ಅವರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಯಿತು.