ಬೆಳ್ಳಿಪ್ಪಾಡಿ ಭಜನಾ ಮಂದಿರದಲ್ಲಿ ಸತ್ಯನಾರಾಯಣ ಪೂಜೆ, ಪ್ರಾದೇಶಿಕ ಸಮಿತಿ ಸಭೆ
0
ಮಾರ್ಚ್ 02, 2019
ಮುಳ್ಳೇರಿಯ: ಬೆಳ್ಳಿಪ್ಪಾಡಿ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅಡೂರು ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಬೆಳ್ಳಿಪ್ಪಾಡಿ ಪ್ರಾದೇಶಿಕ ಸಮಿತಿ ಸಭೆಯು ನಡೆಯಿತು. ಪ್ರಾದೇಶಿಕ ಸಮಿತಿ ಅಧ್ಯಕ್ಷ ಬಿ.ಎಚ್.ಹುಕ್ರಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಅಡೂರು ಕ್ಷೇತ್ರ ಉತ್ಸವ ಸಮಿತಿ ಅಧ್ಯಕ್ಷ ಅತ್ತನಾಡಿ ರಾಮಚಂದ್ರ ಮಣಿಯಾಣಿ ಉತ್ಸವ ಪೂರ್ವತಯಾರಿಯ ಬಗ್ಗೆ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಗಂಗಾಧರ ರಾವ್ ಕಾಂತಡ್ಕ, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಂಡೆಬೆಟ್ಟು ಪ್ರಭಾಕರ ನಾಯ್ಕ್, ಕೋಟಿಗದ್ದೆ ಜನಾರ್ದನ ನಾಯ್ಕ್, ಎ.ಕೃಷ್ಣ ಮಣಿಯಾಣಿ ಪರಪ್ಪೆ ಉಪಸ್ಥಿತರಿದ್ದರು.
ಭಜನಾ ಮಂದಿರದ ಅಧ್ಯಕ್ಷ ತೋಟ ಚಂದ್ರಶೇಖರ ಗೌಡ ಸ್ವಾಗತಿಸಿ, ವಂದಿಸಿದರು. ಶಿವರಾಮ ಗೌಡ ಕಾರ್ಯಕ್ರಮ ನಿರೂಪಿಸಿದರು.