ಇಬ್ಬರಿಂದ ನಾಮಪತ್ರಿಕೆ ಸಲ್ಲಿಕೆ
0
ಮಾರ್ಚ್ 30, 2019
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದದಲ್ಲಿ ಶನಿವಾರ ಇಬ್ಬರು ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸಿದ್ದಾರೆ. ಕೆ.ಪಿ.ಸತೀಶ್ಚಂದ್ರನ್(ಸಿ.ಪಿ.ಎಂ.) ಮತ್ತು ಸಿ.ಎಚ್.ಕುಂಞÂಂಬು(ಸಿ.ಪಿ.ಎಂ.) ಅವರು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ತಮ್ಮ ನಾಮಪತ್ರಿಕೆ ಸಲ್ಲಿಸಿದ್ದಾರೆ. ಏ.4 ವರೆಗೆ ನಾಮಪತ್ರಿಕೆ ಸಲ್ಲಿಕೆಗೆ ಅವಕಾಶಗಳಿವೆ.
ಇಬ್ಬರೂ ಒಂದೇ ಪಕ್ಷದವರಾಗಿದ್ದು, ಪ್ರಧಾನ ಅಭ್ಯರ್ಥಿಗೆ ಡಮ್ಮಿಯಾಗಿ ಮತ್ತೊಬ್ಬರೂ ನಾಮಪತ್ರ ಸಲ್ಲಿಸುವುದು ಪದ್ದತಿಯಾಗಿ ಬೆಳೆದುಬಂದಿದೆ. ನಾಮಪತ್ರ ಹಿಂಪಡೆಯುವ ದಿನದಂದು ಡೆಮ್ಮಿ ಅಭ್ಯರ್ಥಿ ನಾಮಪತ್ರ ಹಿಂಪಡೆಯುವ ಮೂಲಕ ಅಧಿಕೃತ ಅಭ್ಯರ್ಥಿಯ ಉಮೇದ್ವಾರಿಕೆ ನಿಖರಗೊಳ್ಳಲಿದೆ.