ನಾರಂಪಾಡಿಯಲ್ಲಿ ಮಹಾ ಶಿವರಾತ್ರಿ ಉತ್ಸವ
0
ಮಾರ್ಚ್ 05, 2019
ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ಮಹಾಶಿವರಾತ್ರಿ ಉತ್ಸವ ಮಹೋತ್ಸವವು ವೇದ ಮೂರ್ತಿ ಬ್ರಹ್ಮ ಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿತು.
ಸೋಮವಾರ ಬೆಳಿಗ್ಗೆ ಶ್ರೀ ಮಹಾದೇವರಿಗೆ ಪೂಜೆ, ಬಳಿಕ ಏಕಾದಶ ರುಧ್ರಾಭಿಷೇಕ ಹಾಗೂ ನವಕಾಭಿಷೇಕ, ತುಲಾಭಾರ ಸೇವೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ 2 ಗಂಟೆಯಿಂದ ಕರ್ನಾಟಕ ಜಾನಪದ ಪರಿಷತ್ತು ಪ್ರಶಸ್ತಿ ಪುರಸ್ಕøತ ಜಯರಾಮ ಪಾಟಾಳಿ ಪಡುಮಲೆಯವರ ನಿರ್ದೇಶನದಲ್ಲಿ ಶಂಕರ ನಾರಾಯಣ ಯಕ್ಷಗಾನ ಕಲಾ ಸಂಘ ಕೊಲ್ಲಂಪಾರೆ - ಕುಂಟಿಕಾನ ಇವರಿಂದ ಯಕ್ಷಗಾನ ಬಯಲಾಟ ಭಸ್ಮಾಸುರ ಮೋಹಿನಿ ಪ್ರದರ್ಶನಗೊಂಡಿತು. ಸಂಜೆ ನಾರಂಪಾಡಿ ಶ್ರೀ ಉಮಾಮಹೇಶ್ವರ ಭಜನಾ ಸಮಿತಿ, ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಸಂಘ, ಮವ್ವಾರು ಶ್ರೀ ಕೃಷ್ಣ ಭಜನಾ ಸಂಘ, ನೆಲ್ಯಡ್ಕ ಶ್ರೀ ಮೂಕಾಂಬಿಕಾ ಭಜನ ಸಂಘ ಮೊದಲಾದವರಿಂದ ಭಜನಾ ಕಾರ್ಯಕ್ರಮ ಮತ್ತು ರಾತ್ರಿ ಕಾರ್ತಿಕ ಪೂಜೆ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಬದಿಯಡ್ಕ ಸುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಜರಗಿತು. ಸುನಾದ ಯುವಭಾರತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಸುಮಧುರ ಹಾಡುಗಾರಿಕೆಯಿಂದ ಸಂಗೀತಾಸಕ್ತರ ಮನ ತಣಿಸಿದರು. ರಾಗ, ತಾಳ, ಲಯಗಳ ಮೃದುವಾದ ಮನಮುಟ್ಟುವ ಸಂಯೋಜನೆಯು ಕೇಳುಗರಿಗೆ ನೂತನ ಅನುಭವವನ್ನು ನೀಡಿತು. ಪಾರಾಕಾಷ್ಠೆಯಲ್ಲಿ ಶಾಸ್ತ್ರೀಯ ಸಂಗೀತದ ಮಾಧುರ್ಯ ಭಕ್ತಿ-ಭಾವ ಪರವಶತೆಯನ್ನು ಉಂಟುಮಾಡಿತು. ವೈಷ್ಣವಿ, ಅನನ್ಯ, ಸಿಂಧುಶ್ರೀ, ಆತ್ರೇಯಿ, ಉಪಾಸನಾ, ಶ್ರೀವತ್ಸ, ಅನಘ್ರ್ಯ, ಸಂದೇಶ್, ಅವ್ಯಯ ಸುಧಾ, ನಿತೀಶ್, ವಿಜೇತ ಸುಬ್ರಹ್ಮಣ್ಯ, ಧೃತಿ, ವೈನವಿ, ಶ್ರೇಯಾ, ಭಾಗ್ಯ ಶ್ರೀ, ಸ್ಮೃತಿ ಮಾಲ, ಪ್ರಗತಿ, ಅಕ್ಷಯಕೃಷ್ಣ , ಅನುಶ್ರೀ, ಈಶಾನ್, ಅವರ್ಣಾ ಹಾಡುಗಾರಿಕೆಯಲ್ಲಿ ಮತ್ತು ಮೃದಂಗ ದಲ್ಲಿ ವೆಂಕಟ ಯಶಸ್ವಿ ಕಬೆಕೋಡು, ಮಾ. ವಿಜೇತ ಸುಬ್ರಹ್ಮಣ್ಯ ಕಬೆಕೋಡು, ವಯಲಿನ್‍ನಲ್ಲಿ ಪ್ರಭಾಕರ ಕುಂಜಾರು, ಮಾ. ವಿಜೇತ ಸುಬ್ರಹ್ಮಣ್ಯ ಕಬೆಕೋಡು,ಕು. ಅಮೃತೇಶ್ವರಿ.ಸಿ.ಎಚ್. ಸಹಕರಿಸಿದರು.