ಆರೋಗ್ಯ ಜಾಗೃತಿ ಸಂದೇಶ ಯಾತ್ರೆ ಸಂಪನ್ನ
0
ಮಾರ್ಚ್ 03, 2019
ಕಾಸರಗೋಡು: ರಾಜ್ಯ ಸರಕಾರದ ಸಾಂಕ್ರಾಮಿಕ ರೋಗ ಪ್ರತಿರೋಧ ಜಾಗೃತಿ ಚುವಟಿಕೆಯಾಗಿರುವ ಆರೋಗ್ಯ ಜಾಗೃತಿ ಯೋಜನೆಯ ಅಂಗವಾಗಿ ಪರ್ಯಟನೆ ನಡೆಸಿದ ಆರೋಗ್ಯ ಜಾಗೃತಿ ಸಂದೇಶ ಯಾತ್ರೆ ಸಮಾಪ್ತಿಗೊಂಡಿದೆ.
ಫೆ.26ರಂದು ಮೊಗ್ರಾಲ್‍ಪುತ್ತೂರಿನಿಂದ ಆರಂಭಗೊಂಡಿದ್ದ ಯಾತ್ರೆ ಕಾಂಞಂಗಾಡ್ ಕಿರು ಸಿವಿಲ್ ಸ್ಟೇಷನ್ ನಲ್ಲಿ ಸಮಾರೋಪಗೊಂಡಿದೆ. ಸಮಾರೋಪ ಸಮಾರಂಭವನ್ನು ಕಾಂಞಂಗಾಡ್ ನಗರಸಭೆ ಉಪಾಧ್ಯಕ್ಷೆ ಎಂ.ಸುಲೈಖಾ ಉದ್ಘಾಟಿಸಿದರು. ಸದಸ್ಯೆ ಎಚ್.ರಂಷಿದಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾ ಮಾಸ್ ಮೀಡಿಯ ಅಧಿಕಾರಿ ಡಾ.ಎ.ಟಿ.ಮನೋಜ್, ಕಾಂಞಂಗಾಡ್ ಮಿಡ್ ಟೌನ್ ರೋಟರಿ ಅಧ್ಯಕ್ಷ ಮುಕುಂದ ಪ್ರಭು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ವಿ.ಸುರೇಶನ್ ಸ್ವಾಗತಿಸಿ, ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ನಯನಾ ವಂದಿಸಿದರು.
ಸಮಾರೋಪ ಸಮಾರಂಭ ಅಂಗವಾಗಿ ವರ್ಣರಂಜಿತ ಮೆರವಣಿಗೆ ನಡೆಯಿತು. ಕಾಂಞಂಗಾಡ್ ಸ್ಮೃತಿ ಮಂಟಪದಿಂದ ಆರಂಭಗೊಂಡ ಮೆರವಣಿಗೆ ನಗರದಲ್ಲಿ ಪರ್ಯಟನೆ ನಡೆಸಿತು. ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಕಾರ್ಯಕರ್ತರು, ಕಾಂಞಂಗಾಡ್ ಸರಕಾರಿ ನರ್ಸಿಂಗ್ ಸ್ಕೂಲ್ ಮತ್ತು ಲಕ್ಷ್ಮೀ ಮೇಗರ್ ಕಾಲೇಜ್ ಆಫ್ ನಸಿರ್ಂಗ್‍ನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಆರೋಗ್ಯ ಜಾಗೃತಿ ಸಂದೇಶ ಯಾತ್ರೆ ಜಿಲ್ಲೆಯ ವಿವಿಧೆಡೆ ಪರ್ಯಟನೆ ನಡೆಸಿದೆ. ಈ ವೆಳೆ ಆರೋಗ್ಯ ಜಾಗೃತಿ ಮೂಡಿಸುವ ಕಿರು ನಾಟಕ, ಜಿಲ್ಲಾ ವೆಕ್ಟರ್ ಕಂಟ್ರೋಲ್ ಯೂನಿಟ್ ವತಿಯಿಂದ ಜಾಗೃತಿ ಮೂಡಿಸುವ ವೀಡಿಯೋ ಪ್ರದರ್ಶನ ಪ್ರಸ್ತುತಗೊಂಡಿತ್ತು.