ಗ್ರಂಥಾಲಯಗಳು ದೇವಾಲಯಕ್ಕೆ ಸಮಾನ-ಡಾ.ಆಮಿನ
0
ಮಾರ್ಚ್ 03, 2019
ಕುಂಬಳೆ : ಕೋಟೆಕಾರು ನೂತನವಾಗಿ ಆರಂಭಿಸಿದ ಲೈಬ್ರರಿಗೆ ಪುಸ್ತಕವನ್ನು ಸ್ವೀಕರಿಸಿಕೊಂಡು ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿದ ಕಾಸರಗೋಡು ಜಿಲ್ಲಾ ಟಿಬಿ ಅಧಿಕಾರಿ ಡಾ. ಆಮಿನ ಅವರು ಗ್ರಂಥಾಲಯವು ದೇವಾಲಯಕ್ಕೆ ಸಮಾನ, ಕದಿಯಲಾಗದ ಸಂಪತ್ತೆಂದರೆ ಜ್ಞಾನ ಮಾತ್ರ. ಅದನ್ನು ಗಳಿಸಲು ಓದಿನೆಡೆಗೆ ಉತ್ಸಾಹ ತೋರಬೇಕೆಂದು ಕರೆ ನೀಡಿದರು.
ಪಂಚಾಯತಿ ಸದಸ್ಯ ಹರೀಶ್ ಗಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಹರು ಯುವಕೇಂದ್ರದ ಕಾರ್ಯಕ್ರಮ ಅಧಿಕಾರಿ ಶಾಫಿ ಸಲಿಂ , ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸತ್ಯ ಶಂಕರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಕೋಫೆ ತನ್ಬಿಹುಲ್ ಇಸ್ಲಾಂ ಸೆಂಟ್ರಲ್ ಸ್ಕೂಲ್‍ನ ಪ್ರಾಂಶುಪಾಲ ಜೇಕಬ್ ಅಗಸ್ಟೀನ್ ಪುಸ್ತಕವನ್ನು ನೀಡಿ ಶುಭಾಶಯ ಕೋರಿದರು. ಯನ್ ಎಸ್ ಎಸ್ ಕುಂಬಳೆ ಘಟಕದ ಸದಸ್ಯ ಪ್ರಜ್ವಲ್.ಕೆ. ಸ್ವಾಗತಿಸಿ, ಜ್ಞಾನನದೀಪ ಆಟ್ರ್ಸ್ ಮತ್ತು ಕಲ್ಚರಲ್ ಪೋರಂ ಸದಸ್ಯ ನಿತೇಶ್ ವಂದಿಸಿದರು. ನೆಹರು ಯುವಕೇಂದ್ರ ಸುರಕ್ಷ ಪ್ರೊಜೆಕ್ಟ್ ಕಾಸರಗೋಡು ಇದರ ಕಾರ್ಯಕರ್ತ ನಾರಾಯಣ ಪಿ ಪೆರಡಾಲ ಕಾರ್ಯಕ್ರಮ ನಿರೂಪಿಸಿದರು.