ಭಾರತದ ಉಪಗ್ರಹ-ವಿರೋಧಿ ಕ್ಷಿಪಣಿ ಪರೀಕ್ಷೆ: ರಕ್ಷಣಾತ್ಮಕ ಪ್ರತಿಕ್ರಿಯೆ ನಿಡಿದ ಚೀನಾ
0
ಮಾರ್ಚ್ 28, 2019
ಬೀಜಿಂಗ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಎ-ಸ್ಯಾಟ್ ಆಂಟಿ ಸ್ಯಾಟೆಲೈಟ್ ಮಿಸೈಲ್ ಮೂಲಕ ಲೈವ್ ಸ್ಯಾಟೆಲೈಟ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿ ದಾಖಲೆ ನಿರ್ಮಿಸಿದ್ದು ಇದಕ್ಕೆ ಚೀನಾ ರಕ್ಷಣಾತ್ಮಕವಾಗಿ ಪ್ರತಿಕ್ರಯಿಸಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಬಾಹ್ಯಾಕಾಶದಲ್ಲಿ ಶಾಂತಿ ಕಾಪಾಡಿಕೊಳ್ಲಲು ಬದ್ದವಾಗಿರಲಿದೆ ಎಂದು ಭಾವಿಸುತ್ತೇನೆ ಚೀನಾ ಹೇಳಿದೆ.
ಜಾಗತಿಕ ಉಪಗ್ರಹವೊಂದನ್ನು ಹೊಡೆದುಹಾಕುವ ಮೂಲಕ ಭಾರತ ಉಪಗ್ರಹ-ವಿರೋಧಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದರು. ಇದು ಭಾರತವನ್ನು ಜಾಗತಿಕ ಸೂಪರ್ ಪವರ್ ರಾಷ್ಟ್ರಗಳ ಸಾಲಿನಲ್ಲಿ ಸೇರಿಸುವಂತಹಾ ಅಪರೂಪದ ಸಾಧನೆಯಾಗಿದೆ.
ಜಗತ್ತಿನಲ್ಲಿ ಅಮೆರಿಕಾ, ರಷ್ಯಾ, ಚೀನಾ ಹೊರತಾಗಿ ಶತ್ರುರಾಷ್ಟ್ರಗಳ ಉಪಗ್ರಹಗಳನ್ನು ಹೊಡೆದುರುಳಿಸಬಲ್ಲ ಕಾರ್ಯತಂತ್ರದ ಸಾಮಥ್ರ್ಯವನ್ನು ಪಡೆದುಕೊಂಡ ಜಗತ್ತಿನ ನಾಲ್ಕನೇ ರಾಷ್ಟ್ರ ಭಾರತವಾಗಿದೆ.
ಭಾರತ ಉಪಗ್ರಹ-ವಿರೋಧಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ ಎನ್ನುವ ವರದಿಯನ್ನು ನಾವು ಗಮನಿಸಿದ್ದೇವೆ. ಪ್ರತಿ ದೇಶವೂ ಬಾಹ್ಯಾಕಾಶದಲ್ಲಿ ಶಾಂತಿಯನ್ನು ಎತ್ತಿಹಿಡಿಯಲು ಬದ್ದವಾಗಿದೆ ಎಂದು ನಾವು ಭಾವಿಸುತ್ತೇವೆ" ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.
2007 ರ ಜನವರಿಯಲ್ಲಿ ಹವಾಮಾನ ಉಪಗ್ರಹವನ್ನು ನಾಶಗೊಳಿಸುವ ಮೂಲಕ ಚೀನಾ ಉಪಗ್ರಹ ವಿರೋಧಿ ಕ್ಷಿಪಣಿ ನಿರ್ನಾಮ ಕಾರ್ಯಾಚರಣೆ ಪರೀಕ್ಷೆ ನಡೆಸಿತ್ತು.