ಗೋಡೆ ಚಿತ್ರ ರಚನೆ ತರಬೇತಿ
0
ಮಾರ್ಚ್ 02, 2019
ಕಾಸರಗೋಡು: ರಾಜ್ಯ ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಆರನ್ಮುಳದಲ್ಲಿ ಚಟುವಟಿಕೆ ನಡೆಸುತ್ತಿರುವ ವಾಸ್ತುವಿದ್ಯಾ ಗುರುಕುಲದ ಆಶ್ರಯದಲ್ಲಿ ಎರಡು ವರ್ಷಗಳ ಅವಧಿಯ ಗೋಡೆಚಿತ್ರ ರಚನೆ ತರಬೇತಿ ಆರಂಭಗೊಳ್ಳಲಿದೆ. ಹತ್ತು ಸೀಟುಗಳಿರುವ ಡಿಪ್ಲೊಮಾ ಇನ್ ಮ್ಯೂರಲ್ ಪೈಂಟಿಂಗ್ ಕೋರ್ಸ್ ಈ ಮೂಲಕ ಪ್ರಾರಂಭಗೊಳ್ಳಲಿದೆ. ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರುವ ವಾಸ್ತು ಗುರುಕುಲದಿಂದ ಲಭಿಸುವ ಒಂದು ವರ್ಷದ ಮ್ಯೂರಲ್ ಸರ್ಟಿಫಿಕೆಟ್ ಕೋರ್ಸ್ ತೇರ್ಗಡೆ ಶಿಕ್ಣಾರ್ಹತೆಯಾಗಿವೆ. ಪ್ರಾಯಪರಿಧಿ ಇಲ್ಲ. ಅರ್ಜಿ ಫಾರಂ 200ರೂ. ಮನಿ ಆರ್ಡರ್ ಯಾ ಪೋಸ್ಟಲ್ ಆರ್ಡರ್ ಮುಖಾಂತರ ಕಚೇರಿಗೆ ನೇರವಾಗಿ ಪಡೆಯಬಹುದು. ಅರ್ಜಿ ಸಲ್ಲಿಸಲು ಮಾ.31 ಕೊನೆಯ ದಿನಾಂಕ. ಮಾಹಿತಿಗೆ ದೂರವಾಣಿ ನಂಬ್ರ: 0468-2319740, 9847053293, 9947739442 ಸಂಪರ್ಕಿಸಬಹುದು.