ಸಾವಿರ ದಿನಗಳನ್ನು ವ್ಯರ್ಥ ಮಾಡಿದ ಕೇರಳ ಸರಕಾರ : ಕೆ.ನೀಲಕಂಠನ್
0
ಮಾರ್ಚ್ 02, 2019
ಕಾಸರಗೋಡು: ಕೇರಳ ಸರಕಾರವು ಸಾವಿರ ದಿನಗಳನ್ನು ವ್ಯರ್ಥ ಮಾಡಿದೆ. ಅಭಿವೃದ್ಧಿ ಮೊಟಕು, ಕೃಷಿಕರ ಆತ್ಮಹತ್ಯೆ, ಅಕ್ರಮ, ಕೊಲೆ, ಬೆಲೆಯೇರಿಕೆ ದಿನನಿತ್ಯ ಘಟನೆಯಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಕೆ.ನೀಲಕಂಠನ್ ಹೇಳಿದ್ದಾರೆ.
ಅವರು ಪಿಂಚಣಿದಾರರ ಪರಿಷ್ಕರಣೆ ಆಯೋಗ ಕೂಡಲೇ ನೇಮಿಸಬೇಕು, ಹೊರಾಂಗಣ ಚಿಕಿತ್ಸೆಯನ್ನು ಒಳಗೊಂಡು ಸಮಗ್ರ ಚಿಕಿತ್ಸಾ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು, ತುಟ್ಟಿ ಭತ್ತೆಯನ್ನು ಕಡಿತಗೊಳಿಸುವ ಸರಕಾರದ ನಿಲುವನ್ನು ಕೂಡಲೇ ಹಿಂತೆಗೆಯಬೇಕು, ಪೆರಿಯ ಕಲ್ಯೋಟ್‍ನಲ್ಲಿ ನಡೆದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣದ ತನಿಖೆಯನ್ನು ಸಿ.ಬಿ.ಐ.ಗೊಪ್ಪಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಅಸೋಸಿಯೇಶನ್(ಕೆಎಸ್‍ಎಸ್‍ಪಿಎ) ಕಾಸರಗೋಡು ಬ್ಲಾಕ್ ಸಮಿತಿ ಆಶ್ರಯದಲ್ಲಿ ನಡೆದ ಟ್ರಶರಿ ಕಚೇರಿಗೆ ಜಾಥಾ ಮತ್ತು ಧರಣಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಎಂ.ನಾರಾಯಣ ಅಧ್ಯಕ್ಷತೆ ವಹಿಸಿದರು. ಅಚ್ಚೇರಿ ಬಾಲಕೃಷ್ಣನ್, ತಾರಾನಾಥ ಮಧೂರು, ಕೆ.ಎನ್.ಕುಂಞÂ ಕಮ್ಮಾರನ್ ನಂಬ್ಯಾರ್, ವಿ.ಕೆ.ಭಾರ್ಗವಿ, ಕೆ.ಸಿ.ಸುಶೀಲ, ಕೆ.ಜಯಂತಿ, ಕೆ.ಕೃಷ್ಣನ್ ಮನ್ನಿಪ್ಪಾಡಿ, ಕೆ.ಸುರೇಶನ್, ಎಸ್.ಬಾಟ್ಯ, ಕೆ.ತಂಬನ್ ನಾಯರ್, ಕೆ.ಚಂದುಕುಟ್ಟಿ, ಕೆ.ಪ್ರಕಾಶ್ ಮೊದಲಾದವರು ಮಾತನಾಡಿದರು.