ಸೀತಾಂಗೋಳಿಯಲ್ಲಿ ಇಂದು ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ-ಯಕ್ಷಗಾನ ಬಯಲಾಟ
0
ಮಾರ್ಚ್ 30, 2019
ಕುಂಬಳೆ: ಸೀತಾಂಗೋಳಿಯ ಶ್ರೀದೇವಿ ಭಜನಾ ಮಂದಿರದಲ್ಲಿ 34ನೇ ವರ್ಷದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಇಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ9ಕ್ಕೆ ಶ್ರೀಸತ್ಯನಾರಾಯಣ ಪೂಜಾರಂಭ, 11ರಿಂದ ಧಾರ್ಮಿಕ ಸಭೆ,12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆಯಲಿವೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವಿ ಸ್ವ-ಸಹಾಯಸಂಘ ಸೀತಾಂಗೋಳಿ ಇವರ ಪ್ರಾಯೋಜಕತ್ವದಲ್ಲಿ ಸಂಜೆ 6:30 ರಿಂದ 11:30 ರ ತನಕ ಪ್ರಸಿದ್ಧ ತೆಂಕತಿಟ್ಟು ಕಲಾವಿದರ ಕೂಡುವಿಕೆಯಲ್ಲಿ *ಯಕ್ಷಗಾನ ಬಯಲಾಟ* *ಶ್ರೀ ದೇವೀ ಮಹಾತ್ಮ್ಯೆ ಪ್ರದರ್ಶನ ನಡೆಯಲಿದೆ.
ಹಿಮ್ಮೇಳದಲ್ಲಿ *ಭಾಗವತರು : ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ, ತಲ್ಪನಾಜೆ ವೆಂಕಟರಮಣ ಭಟ್, ಚೆಂಡೆ-ಮದ್ದಳೆಯಲ್ಲಿ ಪದ್ಮನಾಭ ಉಪಾದ್ಯಾಯ ಉಜಿರೆ, ಗುರುಪ್ರಸಾದ್ ಬೊಳಿಂಜಡ್ಕ, ಲಕ್ಷ್ಮೀಶ ಬೇಂಗ್ರೋಡಿ,ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ ಪಂಜಿಗದ್ದೆ ಸಹಕರಿಸುವರು. ಮುಮ್ಮೇಳದಲ್ಲಿ ಉಬರಡ್ಕ ಉಮೇಶ ಶೆಟ್ಟಿ, ರಾಧಾಕೃಷ್ಣ ನಾವಡ ಮಧೂರು, ಮಹಾಬಲೇಶ್ವರ ಭಟ್ ಭಾಗಮಂಡಲ, ಹರಿನಾರಾಯಣ ಭಟ್ ಎಡನೀರು, ದಿವಾಣ ಶಿವಶಂಕರ ಭಟ್, ಮಾಧವ ಕೊಳತ್ತಮಜಲು, ಪ್ರಶಾಂತ ಶೆಟ್ಟಿ ನೆಲ್ಯಾಡಿ, ರಾಜೇಶ ನಿಟ್ಟೆ, ರಾಮಚಂದ್ರ ಹೊಳ್ಳ ಎಡನಾಡು, ಮನೀಷ್ ಪಾಟಾಳಿ ಎಡನೀರು, ಗಣೇಶ ಪ್ರಸಾದ ಪದೆಂಜಾರು, ಕಿರಣ ಸಬ್ಬಣಕೋಡಿ ಮತ್ತಿತರು ಭಾಗವಹಿಸುವರು.