ಪ್ರಚಾರ ನೋಟೀಸ್ : ಮುದ್ರಕರ ವಿಳಾಸ, ಪ್ರಕಾಶಕರ ಮಾಹಿತಿ ಪ್ರಕಟ ಅಗತ್ಯ: ಜಿಲ್ಲಾಧಿಕಾರಿ
0
ಮಾರ್ಚ್ 30, 2019
ಕಾಸರಗೋಡು: ಚುನಾವಣೆ ಪ್ರಚಾರಕ್ಕೆ ಮುದ್ರಿಸಲಾಗುವ ನೋಟೀಸ್‍ಗಳು, ಭಿತ್ತಿಪತ್ರಗಳು, ಬ್ರೋಷರ್‍ಗಳು ಇತ್ಯಾದಿಗಳಲ್ಲಿ ಮುದ್ರಿಸುವ ಮುದ್ರಣಾಲಯದ ಪೂರ್ಣ ವಿಳಾಸ, ಪ್ರಕಾಶಕರ ಮಾಹಿತಿ, ಪ್ರತಿಗಳ ಸಂಖ್ಯೆ ಇತ್ಯಾದಿ ಕಡ್ಡಾಯವಾಗಿ ನಮೂದಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ಆದೇಶ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಮುದ್ರಕರ ವಿಳಾಸ, ಪ್ರತಿಗಳ ಸಂಖ್ಯೆ ನಮೂದಿಸದ ನೋಟೀಸು, ಬ್ರೋಷರ್ ಇತ್ಯಾದಿಗಳನ್ನು ವಶಪಡಿಸಲು ಆ್ಯಂಟಿ ಡಿಫೇಸ್‍ಮೆಂಟ್ ಸ್ಕ್ವಾಡ್ ಮತ್ತು ಫ್ಲೈಯಿಂಗ್ ಸ್ಕ್ವಾಡ್ ನೇಮಕಗೊಳಿಸಲಾಗಿದೆ. ಈ ಆದೇಶದ ಉಲ್ಲಂಘನೆ ನಡೆಸಿದ ಮುದ್ರಣಾಲಯ ವಿರುದ್ಧ ಜನ ಪ್ರಾತಿನಿಧ್ಯ ಕಾಯಿದೆ ಪ್ರಕಾರ ಕ್ರಮಕೈಗೊಳ್ಳಲಾಗುವುದು. ಮುದ್ರಣಾಲಯಗಳು ಜಿಲ್ಲಾ„ಕಾರಿ ಕಚೇರಿಯ ಚುನಾವಣೆ ವಿಭಾಗದಲ್ಲಿ ಲಭಿಸುವ ನಿಗದಿತ ಮಾದರಿಯನ್ನು ಪಡೆದು ಇರಿಸಿಕೊಳ್ಳಬೇಕು. ಸಹಾಯಕ ಎಕ್ಸ್ ಪೆಂಡೀಚರ್ ಒಬ್ಸರ್ ವರ್ ತಪಾಸಣೆಗೆ ಬರುವ ವೇಳೆ ಹಾಜರುಪಡಿಸಬೇಕು ಎಂದೂ ಜಿಲ್ಲಾಧಿಕಾರಿ ತಿಳಿಸಿದರು.