ಬಿಜೆಪಿ ಉತ್ತರ ವಲಯ ಜಾಥಾ ನಾಳೆ ಆರಂಭ
0
ಮಾರ್ಚ್ 03, 2019
ಕುಂಬಳೆ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ನೇತೃತ್ವದಲ್ಲಿ ಉತ್ತರ ವಲಯ ಪರಿವರ್ತನಾ ಯಾತ್ರೆ ಮಾ.5 ರಂದು ಕುಂಬಳೆಯಿಂದ ಆರಂಭಗೊಳ್ಳಲಿದೆ.
ಸಂಜೆ 4 ಗಂಟೆಗೆ ಕುಂಬಳೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಸಿ.ಕೆ.ಪದ್ಮನಾಭನ್ ಉದ್ಘಾಟಿಸುವರು. ವಿ.ಕೆ.ಸಜೀವನ್, ಪ್ರಕಾಶ್ ಬಾಬು ಸಹಿತ ರಾಜ್ಯ, ಜಿಲ್ಲಾ ನೇತಾರರು ಭಾಗವಹಿಸುವರು. ಮಾ.10 ರಂದು ಕಲ್ಲಿಕೋಟೆ ಬತ್ತೇರಿಯಲ್ಲಿ ಸಮಾಪ್ತಿಯಾಗಲಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ವಿನಂತಿಸಿದ್ದಾರೆ.