HEALTH TIPS

ಆದರ್ಶ ನಾಯಕ ತತ್ವಾದರ್ಶಗಳೊಂದಿಗೆ ಸಮಾಜ ಸೇವೆ ಸ್ತುತ್ಯರ್ಹ-ಡಾ.ಶಂಕರ ಶೆಟ್ಟಿ ವಿರಾರ್ ಮಂಜೇಶ್ವರದಲ್ಲಿ ಜೈಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ತೃತೀಯ ವಾರ್ಷಿಕೋತ್ಸವ ಸಂಪನ್ನ

ಉಚಿತ ಆಯುರ್ವೇದ ವೈದ್ಯಕೀಯ ಹಾಗೂ ರಕ್ತದಾನ ಶಿಬಿರ-ಸಾಧಕರಿಗೆ ಪಂಚ ಪ್ರಶಸ್ತಿ ಪ್ರದಾನ-ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ಮಂಜೇಶ್ವರ: ಜೈಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ಮೂರನೇ ವಾರ್ಷಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಹೊಸಂಗಡಿಯ ಹಿಲ್ ಸೈಡ್ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಸಂಸ್ಥೆಯ ಕೋಶಾಧಿಕಾರಿ ದಿ.ನವೀನ ಆಳ್ವ ಮುನ್ನಿಪ್ಪಾಡಿ ಅವರ ಸ್ಮರಣಾರ್ಥ ಯೆನಪೋಯ ಆಯುರ್ವೇದ ಆಸ್ಪತ್ರೆ ನರಿಂಗಾನ ಇದರ ಸಹಯೋಗದೊಂದಿಗೆ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಹಾಗೂ ಭಾರತೀಯ ರೆಡ್ ಕ್ರಾಸ ಸಂಸ್ಥೆ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜರಗಿತು. ಈ ಸಂದರ್ಭದಲ್ಲಿ ಜರಗಿದ ಸಭಾ ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಮಾರ್ಗದರ್ಶಕ ರಾಜ ಬೆಳ್ಚಪ್ಪಾಡ ಉದ್ಯಾವರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಸಂಸ್ಥೆಯ ವಿದ್ಯಾನಿಧಿ ಯೋಜನೆಯನ್ನು ಸಮಾಜ ಸೇವಕ ಡಾ.ಶಂಕರ ಶೆಟ್ಟಿ ವಿರಾರ್ ಮುಂಬೈ ಅವರು ಉದ್ಘಾಟಿಸಿ ಮಾತನಾಡಿ, ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಶ್ರೀರಾಮನ ತತ್ವಾದರ್ಶಗಳನ್ನಿಟ್ಟುಕೊಂಡು ಆಹರ್ನಿಶಿಯಾಗಿ ನಿರ್ವಹಿಸಿ ಸಾಮಾಜಿಕ ತುಡಿತ ಬೆಳೆಸಿಕೊಂಡ ಯುವ ಸಮೂಹದ ಕೆಲಸ ಕಾರ್ಯ ಸ್ತುತ್ಯರ್ಹ ಎಂದರು. ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಗಡಿನಾಡಿನ ಭಾಗದಲ್ಲಿ ಅನೇಕ ಜನರು ಶಿಕ್ಷಣ,ಉದ್ಯೋಗ,ವಸತಿ,ಆರೋಗ್ಯ ಕ್ಷೇತ್ರಗಳಲ್ಲಿ ಸಂಕಷ್ಟ ಅನುಭವಿಸುತ್ತಿದ್ದು, ತಾನು ದುಡಿದ ಒಂದು ಭಾಗವನ್ನು ಆರ್ತರ ಕಣ್ಣೀರು ಒರೆಸಲು ವಿನಿಯೋಗಿಸುತ್ತಿದ್ದು ತಾನು ಕೂಡ ಈ ಸಮಾಜಿಕ ಕೈಂಕರ್ಯಕ್ಕೆ ಕೈಜೋಡಿಸುತ್ತಿರುವುದಾಗಿ ಹೇಳಿದರು. ನ್ಯಾಯವಾದಿ ನವೀನ್ ರಾಜ್ ಕೆ.ಜೆ.ಸಭೆಯ ಅಧ್ಯಕ್ಷತೆವಹಿಸಿದ್ದರು.ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಾಕೃಪಾ ಕುಂಜತ್ತೂರು, ಧ.ಗ್ರಾ.ಯೋಜನಾಧಿಕಾರಿ ಚೇತನ ಎಂ, ಯಕ್ಷಬಳಗ ಹೊಸಂಗಡಿ ಸ್ಥಾಪಕ ಸಂಕಬೈಲು ಸತೀಶ್ ಅಡಪ, ಪ್ರವಾಸೋದ್ಯಮ ಇಲಾಖೆಯ ನವೀನ ಆಚಾರ್ಯ ಬೆಂಗಳೂರು, ಡಾ.ಪ್ರಸನ್ನ ಐತಾಳ್, ಬೆಂಗಳೂರಿನ ಸೃಷ್ಠಿ ಕಲಾಭೂಮಿಯ ಸ್ಥಾಪಕ ಮಂಜುನಾಥ ಅಡಪ ಸಂಕಬೈಲ್ , ಡಾ.ಎಡ್ವಾರ್ಡ್ ವಾಸ್, ಪರಿಸರ ಪ್ರೇಮಿ ಮಾಧವ ಉಳ್ಳಾಲ,ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯ ಸದಾಶಿವ ವರ್ಕಾಡಿ, ಯುವವಾಹಿನಿ ಬೆಂಗಳೂರು ಸ್ಥಾಪಕರಾದ ರಾಘವೇಂದ್ರ ಪೂಜಾರಿ ಬ್ರಹ್ಮಾವರ ಮೊದಲಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯು ಕೊಡಮಾಡುವ ಪಂಚರತ್ನ ಪ್ರಶಸ್ತಿಗಳ ಪೈಕಿ ಸಮಾಜರತ್ನ ಪ್ರಶಸ್ತಿಯನ್ನು ಸಮಾಜ ಸೇವಕ ವಿರಾರ್ ಶಂಕರ್ ಶೆಟ್ಟಿ ಮುಂಬೈ ಇವರಿಗೆ ಹಾಗೂ ಮಾತೃರತ್ನ ಪ್ರಶಸ್ತಿಯನ್ನು ಪ್ರೇಮ ಕೆ ಭಟ್ ತೊಟ್ಟೆತ್ತೋಡಿ ಹಾಗೂ ಯೋಧರತ್ನ ಪ್ರಶಸ್ತಿಯನ್ನು ಕರುಣಾಕರ ಮಂಜೇಶ್ವರ, ಕೃಷಿರತ್ನ ಪ್ರಶಸ್ತಿಯನ್ನು ಕೃಷ್ಣಪ್ಪ ಕೋರಿಕ್ಕಾರ್ ಶಿವತೀರ್ಥಪದವು ಮುಳಿಂಜ ಮತ್ತು ಬಾಲರತ್ನ ಪ್ರಶಸ್ತಿಯನ್ನು ಮಾ.ಪುನೀತ್ ಪರಂಕಿಲ ಇವರಿಗೆ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ಕೇಂದ್ರೀಯ ರೋಟರಿಗೆ ಆಯ್ಕೆಯಾದ ನ್ಯಾಯವಾದಿ ನವೀನ್ ಕೆ.ಜೆ. ಅವರನ್ನು ಗೌರವಿಸಲಾಯಿತು. ಸಂಘಟನೆಯ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೆ ಸಹಾಯಕವಾಗುವಂತೆ ವಿದೇಶದಲ್ಲಿ ಉದ್ಯೋಗಿಯಾಗಿರುವ ಯಜ್ಞೇಶ್ ಶಿವತೀರ್ಥಪದವು ಅವರು ಕೊಡುಗೆಯಾಗಿ ನೀಡಿದ ಲ್ಯಾಪ್ ಟಾಪ್‍ನ್ನು ಸೀಮಾ ಯಜ್ಞೇಶ್ ಸಭೆಯಲ್ಲಿದ್ದ ಶ್ರೀಕೃಷ್ಣ ಶಿವಾಕೃಪಾ ಅವರಿಗೆ ಹಸ್ತಾಂತರಿಸಿದರು. ಅಭಿಷೇಕ್ ಸ್ವಿಚ್ ಆನ್ ಮಾಡಿದರು. ಪಾವೂರು ಚಾಮುಂಡೇಶ್ವರಿ ಭಜನಾ ಮಂದಿರದ ಸುವರ್ಣ ಮಹೋತ್ಸವದ ಅನ್ನದಾನಕ್ಕಾಗಿ ಜೈಶ್ರೀರಾಮ್ ಸಂಘಟನೆ ವತಿಯಿಂದ ನೀಡಲ್ಪಡುವ ಸಹಾಯಧನವನ್ನು ಶ್ರೀರಾಮ್ ಪಾವೂರು ಅವರು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ನಾಗೇಶ್ ಬಳ್ಳೂರು ಅವರಿಗೆ ಹಸ್ತಾಂತರಿಸಿದರು. ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರು ಉಚಿತವಾಗಿ ನೀಡಿದ ಸಸಿಗಳನ್ನು ನನ್ನ ಮರ- ನನ್ನ ಪರಿಸರ ಯೋಜನೆಗೆ ಅಳವಡಿಸಿಕೊಂಡು ವಿತರಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಜೈಶ್ರೀರಾಮ್ ಗೀತ ಸೌರಭ ತಂಡದ ಉದ್ಘಾಟನೆ ಹಾಗೂ ರಸಮಂಜರಿ ಕಾರ್ಯಕ್ರಮ ಜರಗಿತು. ಸಂಸ್ಥೆಯ ಗೌರವ ಸಲಹೆಗಾರ ಜಗದೀಶ್ ಪ್ರತಾಪನಗರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಜಯ ಮಣಿಯಂಪಾರೆ ನಿರೂಪಿಸಿ, ಸಂಸ್ಥೆಯ ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries