ವಿ ದಿ ಪೀಪಲ್' ಕಾರ್ಯಕ್ರಮ
0
ಮಾರ್ಚ್ 30, 2019
`
ಮಂಜೇಶ್ವರ: ತೊಟ್ಟೆತ್ತೋಡಿಯ ಟಿ.ರಾಮ ಬಂಗೇರ ಗ್ರಂಥಾಲಯದ ಆಶ್ರಯದಲ್ಲಿ ಜರಗಿದ `ವಿ ದಿ ಪೀಪಲ್' ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಕಾರ್ಯದರ್ಶಿ ಪಿ.ಕೆ.ಮೊಹಮ್ಮದ್ ಹುಸೈನ್ ಮಾಸ್ಟರ್ ಉದ್ಘಾಟಿಸಿದರು.
ಗ್ರಂಥಾಲಯ ಅಧ್ಯಕ್ಷರಾದ ಟಿ.ಆರ್.ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕಿ ಅನಿತಾ ಮಹಿಳೆಯರ ಇಂದಿನ ಆರೋಗ್ಯದ ಬಗ್ಗೆ ವಿಷಯ ಮಂಡಿಸಿದರು. ತೊಟ್ಟೆತ್ತೋಡಿ ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಯಸ್, ಮೀಂಜ ಗ್ರಾ.ಪಂ. ಆಶಾ ಕಾರ್ಯಕರ್ತೆ ಸುಜಾತ ಶೆಟ್ಟಿ ಶುಭ ಹಾರೈಸಿದರು. ವಿಜಯಲಕ್ಷ್ಮೀ ಟೀಚರ್ ಸ್ವಾಗತಿಸಿ, ಗ್ರಂಥಪಾಲಿಕ ಮೋಹಿನಿ ವಂದಿಸಿದರು.