ಅಮೃತ ಮಹೋತ್ಸವದ ನಗರ ಭಜನೆ ಕುಂಬಳೆಯಲ್ಲಿ
0
ಮಾರ್ಚ್ 29, 2019
ಕುಂಬಳೆ: ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ಸ್ವೀಕಾರದ ಅಮೃತ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ನಗರ ಭಜನೆಯು ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನದಿಂದ ಕುಂಬ್ಳೆ ವೀರ ವಿಠ್ಠಲ ದೇವಸ್ಥಾನಕ್ಕೆ ಆಗಮಿಸಿತು. ಆ ಬಳಿಕ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ ನಡೆದು ಶ್ರೀ ವೀರ ವಿಠ್ಠಲ ದೇವರಿಗೆ ಮಹಾಪೂಜೆ ಜರಗಿತು. ಶುಕ್ರವಾರ ಸಂಜೆ ಕುಂಬ್ಳೆಯಿಂದ ನಗರ ಭಜನೆಯು ಕಾಸರಗೋಡು ವರದರಾಜ್ ವೆಂಕಟರಮಣ ದೇವಳಕ್ಕೆ ತೆರಳಿತು.