HEALTH TIPS

ನಿಡುಗಳ ಅಗ್ರಸಾಲೆಯಲ್ಲಿ ಮುಳ್ಳೇರ್ಯ ಹವ್ಯಕ ಮಂಡಲದ ಸಭೆ

ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆ ನೀರ್ಚಾಲು ವಲಯ ನಿಡುಗಳ ಅಗ್ರಸಾಲೆಯಲ್ಲಿ ಜರಗಿತು. ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ವರದಿ ವಾಚಿಸಿದರು. ಬಳಿಕ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 26ನೆಯ ಸಂನ್ಯಾಸಗ್ರಹಣ ದಿನಾಚರಣೆಯ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ ಪೆರಾಜೆ ಮಾಣಿಯಲ್ಲಿ ಎ.9 ಮತ್ತು 11 ರಂದು ಎರಡು ದಿನಗಳಲ್ಲಿ ಜರಗಲಿರುವ `ಜೀವನದಾನ' ಹಾಗೂ 26ನೆಯ ಯೋಗಪಟ್ಟಾಭಿಷೇಕ ದಿನಾಚರಣೆಯ ಅಂಗವಾಗಿ ಜರಗಲಿರುವ `ಮಹಾಪಾದುಕಾ ಪೂಜೆ' ಸಮಾರಂಭದ ಸಮಗ್ರ ಮಾಹಿತಿಗಳನ್ನು ವಿವರಿಸಿದರು. ಜೀವನದಾನ ಮತ್ತು ಯೋಗ ಪಟ್ಟಾಭಿಷೇಕನ ಆಯೋಜನ ಸಮಿತಿಯ ರಾಜೇಶ್ ಅರಂತಾಡಿ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕರ್ತರ ಜವಾಬ್ದಾರಿಗಳ ಬಗ್ಗೆ ಮಾಹಿತಿಗಳನ್ನಿತ್ತರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ವೇ.ಮೂ.ಬಾಲಕೃಷ್ಣ ಪ್ರಸಾದ ಅವರು ಎ.2 ರಂದು ಪ್ರದೋಷ ಕಾಲದಲ್ಲಿ ಪೆರಡಾಲ ವಲಯದ ನೀರ್ಚಾಲು ಸಮೀಪದ ಏಣಿಯರ್ಪಿನಲ್ಲಿರುವ ತಮ್ಮ ನಿವಾಸ ಈಶಾವಾಸ್ಯಂನಲ್ಲಿ ಜರಗಲಿರುವ ಪ್ರತಿರುದ್ರ, ಕುಂಕುಮಾರ್ಚನೆ, ಭಜನಾ ರಾಮಾಯಣ ಕಾರ್ಯಕ್ರಮದ ಕುರಿತು ಸಂಗ್ರಹ ಮಾಹಿತಿಗಳನ್ನಿತ್ತು ಆಮಂತ್ರಿಸಿದರು. ಕಾರ್ಯಕ್ರಮದ ಯಶಸ್ವಿಗೆ ಸಭೆಯಲ್ಲಿ ಸಮಾಲೋಚಿಸಿ ತೀರ್ಮಾನಿಸಲಾಯಿತು. ಹವ್ಯಕ ಮಹಾಮಂಡಲ ವಿದ್ಯಾರ್ಥಿ ವಾಹಿನಿಯು ಭಾನ್ಕುಳಿ ಮಠದ ಶಂಕರ ಕಿಂಕರ ಸಮಿತಿಯ ಸಹಯೋಗದೊಂದಿಗೆ ಮೇ 8 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿ ಮಠದಲ್ಲಿರುವ ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯವಾದ ಗೋಸ್ವರ್ಗದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಡೆಯುವ `ಮಕ್ಕಳ ಮಹಾಸಮಾವೇಶ' ಮತ್ತು ಶಿರಸಿ ಅಂಬಾಗಿರಿ ಶ್ರೀ ರಾಮಕೃಷ್ಣ ಕಾಳಿಕಾಮಠದಲ್ಲಿ ಮೇ ತಿಂಗಳ 2 ರಿಂದ 7 ರ ತನಕ ಹವ್ಯಕ ಮಹಾಮಂಡಲ - ವಿದ್ಯಾರ್ಥಿವಾಹಿನೀ ನೇತೃತ್ವದಲ್ಲಿ ಜರಗಲಿರುವ `ವಿರಾಮ-ವಿಹಾರ-ವಿಚಾರ ಶಿಬಿರ-2019' ಇವುಗಳ ಕುರಿತು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ ಸಮಗ್ರ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2018 - 19 ನೇ ಸಾಲಿನ `Àರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ.81ಅಂಕಗಳಿಸಿದ ನೀರ್ಚಾಲು ವಲಯದ ಕುಂಟಿಕಾನ ಮಠ ಘಟಕದ ಅನುಷಾ ಕೆ. ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 2018 - 19 ನೇ ಸಾಲಿನ ಕರ್ನಾಟಕ ಸಂಗೀತದ (ಹಾಡುಗಾರಿಕೆ) ಪ್ರಾಥಮಿಕ ಗ್ರೇಡ್ ಪರೀಕ್ಷೆಯಲ್ಲಿ ಶೇ.94.25 ಅಂಕಗಳಿಸಿದ ನೀರ್ಚಾಲು ವಲಯದ ಕುಳಮರ್ವ ಘಟಕದ ಸ್ಮೃತಿಮಾಲ ಅವರನ್ನು ಪುರಸ್ಕರಿಸಲಾಯಿತು. ಮಂಡಲಾಧ್ಯಕ್ಷ ಪೆÇ್ರ.ಶ್ರೀಕೃಷ್ಣ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಾಮೂಹಿಕ ಭಜನಾ ರಾಮಾಯಣ, ಸಾಮೂಹಿಕ ರಾಮಜಪ, ಶಾಂತಿಮಂತ್ರ, ಧ್ವಜಾವರೋಹಣ ಶಂಖನಾದವಾಗಿ ಸಭೆ ಮುಕ್ತಾಯವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries