HEALTH TIPS

ರಾಜ್ಯದಲ್ಲಿನ್ನು ಸಂಚಾರಿ ಪೆಟ್ರೋಲ್ ಬಂಕ್! ಕ್ಯೂ ನಿಲ್ಲಲು ಇನ್ನು ಗುಡ್‍ಬೈ

ಕುಂಬಳೆ: ಪೆಟ್ರೋಲ್ ಬಂಕ್‍ಗಳಲ್ಲಿ ಕ್ಯೂ ನಿಂತುಕೊಂಡು ಇಂಧನ ಹಾಕಿಸಿಕೊಳ್ಳುವುದಕ್ಕೆ ರಾಜ್ಯದಲ್ಲಿ ಇನ್ನು ಗುಡ್‍ಬೈ ಹೇಳಲು ಕಾಲ ಸನ್ನಿಹಿತವಾಗಿದ್ದು, ಇದೀಗ ವಾಹನ ಇರುವ ಕಡೆಯೇ ಪೆಟ್ರೋಲ್ ಬಂಕ್ ಬರುತ್ತಿದೆ. ಅದುವೇ ಸಂಚಾರಿ ಪೆಟ್ರೋಲ್ ಬಂಕ್! ಮನೆಯಂಗಳದಲ್ಲಿರುವ ವಾಹನ, ಸಂಸ್ಥೆಗಳಲ್ಲಿನ ವಾಹನಗಳಿಗೆ ಇಂಧನ ಲಭ್ಯವಾಗಿಸಲು ಇದೀಗ ಕೇರಳದ ಮೊದಲ ಸಂಚಾರಿ ಪೆಟ್ರೋಲ್ ಬಂಕ್ ಮಲಪ್ಪುರದಲ್ಲಿ ಕಾರ್ಯಾರಂಭಗೊಂಡಿದೆ. ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಶನ್, ಹಿಂದುಸ್ತಾನ್ ಪೆಟ್ರೋಲಿಯಂ ಮೊದಲಾದುವು ಪುಣೆ ಕೇಂದ್ರವಾಗಿರುವ ಸ್ಟಾರ್ಟ್‍ಅಪ್ ಕಂಪೆನಿಯ ಸಹಾಯದೊಂದಿಗೆ ಈ ಯೋಜನೆ ಜಾರಿಗೊಳಿವೆ. ಮಲಪ್ಪುರದ ಮೇಲ್ಕುರಿ ಪಿಲಾಕ್ಕಾ ಎಂಬಲ್ಲಿನ ಪಿಎಂಆರ್ ಪೆಟ್ರೋಲ್ ಬಂಕ್ ಮಾಲೀಕ ಪಿ.ಎಂ. ಆಲಾವಿ ಹಾಜಿಗೆ ರಾಜ್ಯದಲ್ಲೇ ಮೊದಲ ಸಂಚಾರಿ ಪೆಟ್ರೋಲ್ ವಿತರಣೆಯ ಪರವಾನಗಿ ದೊರಕಿದ್ದು, ಪೆಟ್ರೋಲ್ ಟ್ಯಾಂಕರ್ ಲಾರಿ ಮಲಪ್ಪುರಗೆ ಕಳೆದ ಸೋಮವಾರ ತಲುಪಿದೆ. ಭಾರತದ ಆರನೇ ಟ್ಯಾಂಕರ್ ಲಾರಿ ಇದಾಗಿದೆ. ಸುಮಾರು 6000 ಲೀಟರ್ ಇಂಧನ ಸಂಗ್ರಹಿಸುವ, ಪ್ರತ್ಯೇಕ ಸುರಕ್ಷಾ ವಿಧಾನವನ್ನು ಹೊಂದಿರುವ ಟಾಟಾ ಆಲ್ಟ್ರಾ 0104 ಟ್ಯಾಂಕರ್ ಲಾರಿ ಇಂಧನದೊಂದಿಗೆ ಸಂಚಾರ ನಡೆಸಲಿದೆ. ಸಂಚರಿಸುವ ಬಂಕ್ ಆರಂಭಗೊಳ್ಳುವ ಮೂಲಕ ಅಪಘಾತರಹಿತವಾಗಿ ಅಗತ್ಯವಿದ್ದವರಿಗೆ ಆಯಾ ಸ್ಥಳಗಳಿಗೆ ತಲುಪಿ ಇಂಧನ ತುಂಬಿಸಲು ಸಾಧ್ಯವಾಗಲಿದೆ. ರೆಸಿಡೆನ್ಶಿಯಲ್ ಏರಿಯಾಗಳಲ್ಲೂ ಬಂಕ್ ಪ್ರಯೋಜನ ಪಡೆಯಬಹುದು. ವಾಹನಗಳು ಕಾಯಂ ಆಗಿ ಸಂಚಾರ ನಡೆಸುವ ಸ್ಥಳಗಳಲ್ಲಿ ಅಗತ್ಯವಿದ್ದವರಿಗೆ ಚಿಲ್ಲರೆಯಾಗಿ ಇಂಧನ ಲಭಿಸಲಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವ ಸೈಟ್‍ಗಳಲ್ಲಿ ಜನರೇಟರ್ ಸಹಿತ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಇದರ ಸಹಾಯವನ್ನು ಪಡೆಯಬಹುದು. ಕ್ಯಾನ್‍ಗಳಲ್ಲಿ ತುಂಬಿಸಿ ವಾನಗಳಲ್ಲಿ ಸಾಗಾಟ ನಡೆಸುವ ಅಗತ್ಯವಿಲ್ಲ. ಅಲ್ಲದೆ ದೊಡ್ಡ ಸಂಸ್ಥೆಗಳಲ್ಲಿನ ವಾಹನಗಳಿಗೂ, ಬಸ್‍ಗಳು ಇದ್ದ ಕಡೆ ತೆರಳಿ ಇಂಧನ ತುಂಬಿಸುವುದಕ್ಕೆ ಸಾಧ್ಯವಾಗಲಿದೆ. ರಿಪೋಸ್ ಕಂಪನಿಯು ಅಭಿವೃದ್ಧಿಪಡಿಸಿದ ಆಪ್ ಮೂಲಕ ಬಂಕ್‍ನಿಂದ ಖರೀದಿ ಹಾಗೂ ಮಾರಾಟವನ್ನು ನಿಯಂತ್ರಿಸಲಾಗುವುದು. ಇಂಧನಕ್ಕಾಗಿ ಆಪ್ ಮೂಲಕ ಬುಕ್ ಮಾಡುವುದರೊಂದಿಗೆ ಆನ್‍ಲೈನ್ ಆಗಿ ಹಣ ಪಾವತಿಸುವ ಸೌಲಭ್ಯವೂ ಇದೆ. ಜಿಪಿಎಸ್ ಮೂಲಕ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗುವುದು. ಸುರಕ್ಷೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಟ್ಯಾಂಕರ್ ಲಾರಿಯಲ್ಲಿ ಅಳವಡಿಸಲಾಗಿದೆ. ನೂತನವಾಗಿ ಪೆಟ್ರೋಲ್ ಬಂಕ್ ಸ್ಥಾಪಿಸಲು ಸ್ಥಳವಕಾಶ ಮತ್ತು ಲಕ್ಷಾಂತರ ರೂ. ಬಂಡವಾಳ ಹೂಡಿಕೆಯ ಬದಲು ನೂತನ ವಿಧಾನ ಮೂಲಕ ದೊಡ್ಡ ಬದಲಾವಣೆಯನ್ನು ತರಲು ಸಾಧ್ಯವಾಗುವುದು. ಟ್ಯಾಂಕರ್ ಲಾರಿಗೆ ಇತರರ ಸಹಾಯ, ಜನರೇಟರ್ ಸಹಾಯವಿಲ್ಲದೆ ಇಂಧನ ತುಂಬಿಸಲು ಸಹ ಸಾಧ್ಯವಾಗುವುದರೊಂದಿಗೆ ಇಂಧನ ವಿತರಣಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ನಿರೀಕ್ಷಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries