ಚುನಾವಣೆ ನಿರೀಕ್ಷಕ ಪ್ರಮೋದ್ ಕುಮಾರ್ ಜಿಲ್ಲೆಗೆ
0
ಮಾರ್ಚ್ 27, 2019
ಕಾಸರಗೋಡು: ಲೋಕಸಭೆ ಚುನಾವಣೆಗೆ ಸಂಬಂಧಿಸಿ ಅಭ್ಯರ್ಥಿಗಳ, ರಾಜಕೀಯ ಪಕ್ಷಗಳ ಚುನಾವಣೆ ವೆಚ್ಚ ನಿರೀಕ್ಷಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣೆ ಆಯೋಗ ಕಾಸರಗೋಡು ಜಿಲ್ಲೆಗಾಗಿ ನೇಮಕಗೊಳಿಸಿರುವ ನಿರೀಕ್ಷಕ ಪ್ರಮೋದ್ ಕುಮಾರ್ ಅವರು ಬುಧವಾರ ಜಿಲ್ಲೆಗೆ ಆಗಮಿಸಿದ್ದಾರೆ.
ದಿಲ್ಲಿಯಲ್ಲಿ ಹಣಕಾಸು ಇಲಾಖೆಯ ಜೊತೆ ಕಮೀಷನರ್ ಆಗಿರುವ ಇವರು ನಿರೀಕ್ಷಣೆ ನಡೆಸಲಿದ್ದಾರೆ. ಚುನಾವಣೆ ಪ್ರಚಾರಕ್ಕಾಗಿ ಬಳಸಲಾಗುವ ಸುಮಾರು 90 ಸಾಮಾಗ್ರಿಗಳ ಬೆಲೆ ಈಗಾಗಲೇ ನಿಗದಿಮಾಡಲಾಗಿದೆ. ಈ ಪ್ರಕಾರ ದಿನಂಪ್ರತಿ ಖರ್ಚುವೆಚ್ಚಗಳನ್ನು ದಾಖಲಿಸಲಾಗುವುದು. ಇದನ್ನುನಿರೀಕ್ಷಕರಿಗೆ ಹಾಜರುಪಡಿಸಬೇಕು. ಹಣ, ಮದ್ಯ, ಇತರ ಕೊಡುಗೆಗಳನ್ನು ನೀಡಿ ಮತದಾತರನ್ನು ಸ್ವಾಧೀನಗೊಳಿಸಬಾರದು. ಬೆದರಿಸಿ ಇತ್ಯಾದಿ ವಿದಾನಗಳಿಂದ ಮತಪಡೆಯುವ ವ್ಯಹಾರವೂ ಸಲ್ಲದು. ಜಿಲ್ಲೆಯ ಚುನಾವಣೆ ಪ್ರಕ್ರಿಯೆ ಕುರಿತು ಜಿಲ್ಲಾಧಿಕಾರಿ ನಿರೀಕ್ಷಕರಿಗೆ ಮಾಹಿತಿ ನಿಡಿದರು. ಚುನಾವಣೆ ವೆಚ್ಚ ಸಂಬಂಧ ರಾಜಕೀಯ ಪಕ್ಷಗಳು, ಸಾರ್ವಜನಿಕರು ದೂರು ಸಲ್ಲಿಸಬಹುದು. ದೂರವಣಿ ಸಂಖ್ಯೆ: 8078244690,6238818193.