ಉಚಿತ ನೇತ್ರ ತಪಾಸಣಾ ಶಿಬಿರ
0
ಮಾರ್ಚ್ 05, 2019
ಬದಿಯಡ್ಕ: ಕೌಮುದಿ ಗ್ರಾಮೀಣ ನೇತ್ರಾಲಯ ಕುಮಾರಮಂಗಲ ಬೇಳದಲ್ಲಿ ಉಚಿತ ನೇತ್ರ ತಪಾಸಣಾ ಹಾಗು ಕಣ್ಣಿನ ಪೆÇರೆ ನಿರ್ಣಯ ಶಿಬಿರ ಇತ್ತೀಚೆಗೆ ನಡೆಯಿತು.
ಮನುಷ್ಯನ ಬಹಳ ಮುಖ್ಯವಾದ ಅಂಗ ಕಣ್ಣು. ಆದುದರಿಂದ ಕಣ್ಣಿನ ಕುರಿತಾಗಿ ವಹಿಸಬೇಕಾದ ಕಾಳಜಿಯ ಬಗ್ಗೆ ಜನರಿಗೆ ತಿಳಿಸಲು, ಕಣ್ಣಿಗೆ ಬಾಧಿಸುವ ರೋಗಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೈದ್ಯರಾದ ಡಾ.ಸುನಿಲ್ ಶಿಬಿರದ ಮುಂದಾಳತ್ವವನ್ನು ವಹಿಸಿದರು. ಡಾ.ಉನೈಸ್ ಟಿ. ಸಹಕರಿಸಿದರು. ನೂರಕ್ಕೂ ಮಿಕ್ಕಿ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದರು.
ಈ ಸಂದರ್ಭದಲ್ಲಿ ಕಣ್ಣಿನ ವಿವಿಧ ಆಂತರಿಕ ಭಾಗಗಳ ಮಾದರಿಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಜನರು ಐವತ್ತು ಪ್ರತಿಶತ ರಿಯಾಯಿತಿ ದರದಲ್ಲಿ ಕಣ್ಣಿನ ಪೆÇರೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಶಿಬಿರದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.