ಸಾರ್ವಜನಿಕ ಅಭಿಪ್ರಾಯ ಪೆಟ್ಟಿಗೆಗೆ ಚಾಲನೆ
0
ಮಾರ್ಚ್ 02, 2019
ಕುಂಬಳೆ: ಮನ್ ಕಿ ಬಾತ್ ಮೋದಿ ಕೆ ಸಾತ್ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಕುಂಬಳೆಯಲ್ಲಿರುವ ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯಾಲಯ ಪರಿಸರದಲ್ಲಿ ಸಾರ್ವಜನಿಕ ಅಭಿಪ್ರಾಯ ಪೆಟ್ಟಿಗೆಯನ್ನು ತೆರೆಯಲಾಗಿದೆ. ಆಸಕ್ತ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಬರೆದು ತಿಳಿಸಬಹುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಶುಕ್ರವಾರ ನಡೆದ ಅಭಿಪ್ರಾಯ ಸಂಗ್ರಹ ಪೆಟ್ಟಿಗೆ ಚಾಲನಾ ಸಂದರ್ಭ ಮಂಜೇಶ್ವರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಧನರಾಜ್ ಪ್ರತಾಪನಗರ, ಮಂಡಲ ಉಪಾಧ್ಯಕ್ಷ ವೀರೇಂದ್ರ ಪ್ರಸಾದ್ ಮಣಿಯಂಪಾರೆ, ನಮನ ಮುಟ್ಟಂ ಉಪಸ್ಥಿತರಿದ್ದರು.