HEALTH TIPS

ರಂಗ ಭೂಮಿಯ ಮೂಲಕ ಮಕ್ಕಳು ಸಮಾಜ ಮುಖಈ ಚಿಂತನೆ ಬೆಳೆಸಬೇಕು: ಉಮೇಶ್‍ಸಾಲಿಯಾನ್

ಮಧೂರು: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಂಗಭೂಮಿಯು ಪ್ರೇರಣೆಯಾಗಬಲ್ಲುದು. ನಾಟಕ, ಸಿನಿಮಾಗಳು ಸಮಾಜಮುಖೀ ಚಿಂತನೆಯತ್ತ ಕೊಂಡೊಯ್ಯಬಲ್ಲುವು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ, ರಂಗ ನಿರ್ದೇಶಕ ಎಂ. ಉಮೇಶ್ ಸಾಲಿಯಾನ್ ಹೇಳಿದರು. ಅವರು ಮಧೂರು ಸಮೀಪದ ಸಾಯಿಕೃಷ್ಣ ನಿವಾಸದಲ್ಲಿ ಚಿನ್ಮಯಾ ವಿದ್ಯಾಲಯದ ವಿದ್ಯಾರ್ಥಿ ಸಾಯಿಕೃಷ್ಣ ನಿರ್ಮಿಸಿದ ಕಿರು ಚಿತ್ರ ಮೇಜಿಕ್ ಪೆನ್ ಅನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಕೇವಲ ಅಂಕ ಗಳಿಸುವುದರ ಬಗಗೆ ಮಾತ್ರ ಯೋಚಿಸದೇ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದು ಅಗತ್ಯ. ರಂಗಭೂಮಿ ಅನೇಕ ಕೌಶಲ್ಯಗಳನ್ನು ತಿಳಿಯಪಡಿಸಲು ಸಹಕಾರಿಯಾಗವುದಲ್ಲದೇ ಸಾಮಾಜಿಕ ಚಿಂತನೆ, ವ್ಯಕ್ತಿತ್ವವನ್ನು ಬೆಳೆಸಲು ದಾರಿದೀಪವಾಗಿದೆ ಎಂದರು. ಅಂತರಾಷ್ಟ್ರೀಯ ಮನ್ನಣೆ ಪಡೆದ ಕನ್ನಡ ಚಲನಚಿತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಇದರಲ್ಲಿ ಅಭಿನಯಿಸಿದ ಸಾಯಿಕೃಷ್ಣ, ಬೊಚ್ಚಲ ಕಿರುಚತ್ರವೇ ಮೇಜಿಕ್ ಪೆನ್ ತೆರೆಗೆ ತರುವಲ್ಲಿ ಶ್ರಮಿಸಿದ್ದಾನೆ. ಮುಖ್ಯ ಅತಿಥಿಯಾಗಿ ಕನ್ನಡ ಸಿನೆಮಾ ನಟ, ನಿವೃತ್ತ ಯೋಧ ತಾರಾನಾಥ ಬೋಳಾರ್ ಮಾತನಾಡಿ, ಸಾಯಿಕೃಷ್ಣನದ್ದು ಹುಟ್ಟು ಪ್ರತಿಭೆ, ಪಾತ್ರಗಳ ಆಯ್ಕೆ, ಛಾಯಾಚಿತ್ರ, ಸಂಗೀತ ಸಂಯೋಜನೆ, ಕ್ಷೇತ್ರಗಳ ಆಯ್ಕೆ, ಸಂಭಾಷಣೆಯಲ್ಲಿ ತೋರ್ಪಡಿಸಿದ ಪ್ರಜ್ಞೆ ಈ ಕಿರುಚಿತ್ರ ಸುಂದರವಾಗಿ ಮೂಡಿ ಬರಲು ಕಾರಣವಾಗಿದೆ. ಇದು ಚಿಕ್ಕ ಮಕ್ಕಳ ನಿಷ್ಕಲ್ಮಶ ಮನಸ್ಸಿನ ಪ್ರತಿಫಲ ಎಂದರು. ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ್ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ನಿರ್ಲಕ್ಷಿಸದೇ ಪೆÇೀಷಿಸಿ ಬೆಳೆಸುವುದು ಹೆತ್ತವರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾಯಿಕೃಷ್ಣ ಅವರ ಶ್ರಮ ಅಸಾಧಾರಣವಾದುದು. ಮಕ್ಕಳ ಪ್ರತಿಭೆಯ ವಿಕಾಸಕ್ಕೆ ಹೆತ್ತವರು ಬೆಂಬಲ ನೀಡಿದಲ್ಲಿ ಖಂಡಿ ಗುರಿತಲುಪುವಲ್ಲಿ ಸಂದೇಹವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಅನಂತಪುರ ಕೈಗಾರಿಕಾಭಿವೃದ್ಧಿ ಸಂಘಟನೆಯ ಅಧ್ಯಕ್ಷ ಫಿರೋಜ್‍ಖಾನ್, ನಿವೃತ್ತ ಉಪಜಿಲ್ಲಾಧಿಕಾರಿ ಬಾಲಕೃಷ್ಣ ಅಗ್ಗಿತ್ತಾಯ ಉಪಸ್ಥಿತರಿದ್ದರು. ಚಿನ್ಮಯಾ ವಿದ್ಯಾಲಯ ಅಧ್ಯಾಪಕ ಶಿವರಾಜ್ ಕಾರ್ಯಕ್ರಮ ನಿರೂಪಿಸಿ, ಕೃಷ್ಣ ಕುಮಾರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries