ತಾಯ್ನಾಡಿಗೆ ಮರಳಿದ ಅಭಿನಂದನ್, ಭಾರತಕ್ಕೆ ಐಎಎಫ್ ಪೈಲಟ್ ಹಸ್ತಾಂತರ
0
ಮಾರ್ಚ್ 02, 2019
ನವದೆಹಲಿ: ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂ??? ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಶುಕ್ರವಾರ ವಾಘಾ ಗಡಿಯ ಮೂಲಕ ತಾಯ್ನಾಡಿಗೆ ಮರಳಿದ್ದಾರೆ.
ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಇಂದು ಸುರಕ್ಷಿತವಾಗಿ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಅವರು ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು.
ಸ್ಥಳದಲ್ಲಿದ್ದ ಐಎಎಫ್ ಅಧಿಕಾರಿಗಳು ಸೇರಿ ಅನೇಕ ದೇಶಾಭಿಮಾನಿಗಳು ದೇಶದ ಹೆಮ್ಮೆಯ ಪುತ್ರ ಅಭಿನಂದನ್ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು. ಬಳಿಕ ಅವರನ್ನು ಅಮೃತಸರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆ ನಂತರ ಐಎ???ಫ್ ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಗುತ್ತಿದೆ.
ಸತತ 4 ಗಂಟೆಗಳ ಕಾಯುವಿಕೆ ಕೊನೆಗೂ ಅಂತ್ಯ, ಅಟಾರಿ ಗಡಿಯಲ್ಲಿ ಮುಗಿಲು ಮುಟ್ಟಿದ ಭಾರತೀಯರ ಸಂಭಮ
ಇನ್ನು ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ಬರೊಬ್ಬರಿ 4 ಗಂಟೆ ವಿಳಂಬವಾಗಿದ್ದು, ಪಾಕಿಸ್ತಾನಿ ಗಡಿ ಅಧಿಕಾರಿಗಳು ಕಾಗದ ಪತ್ರ ಪರಿಶೀಲನೆಗೆ ಸುಧೀರ್ಘ ಸಮಯ ತೆಗೆದುಕೊಂಡಿದ್ದೇ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ ಎನ್ನಲಾಗಿದೆ. ಇನ್ನು ಅತ್ತ ಅಭಿನಂದನ್ ರನ್ನು ಪಾಕಿಸ್ತಾನಿ ಅಧಿಕಾರಿಗಳು ಭಾರತೀಯ ಸೇನೆಯ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿದ್ದಂತೆಯೇ ಅಟಾರಿ ಗಡಿಯಲ್ಲಿ ತುಂಬಿ ತುಳುಕುತ್ತಿದ್ದ ಜನಸ್ತೋಮ ವಂದೇ ಮಾತರಂ. ಭಾರತ್ ಮಾತಾಕಿ ಜೈ. ವೆಲ್ ಕಂ ಬ್ಯಾಕ್ ಅಭಿನಂದನ್ ಎಂದು ಘೋಷಣೆ ಕೂಗುತ್ತಾ ಅಭಿನಂದನ್ ಗೆ ಅದ್ಧೂರಿ ಸ್ವಾಗತ ಕೋರಿದರು.