ಇಂದು ಮಲ್ಲಾವರ ಕ್ಷೇತ್ರದಲ್ಲಿ ಶಿವರಾತ್ರಿ ಕಾರ್ಯಕ್ರಮ
0
ಮಾರ್ಚ್ 03, 2019
ಮುಳ್ಳೇರಿಯ: ಮಲ್ಲಾವರ ಶ್ರೀ ಪಂಚÀಲಿಂಗೇಶ್ವರ ಭಜನಾ ಸಂಘದ 42ನೇ ವರ್ಷದ ಏಕಾಹ ಭಜನೆ ಮತ್ತು ಮಹಾ ಶಿವರಾತ್ರಿ ಆಚರಣೆ ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಲ್ಲಿ ಮಾ.4ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 6.15ಕ್ಕೆ ರುದ್ರ ಪಾರಾಯಣ, 8ಕ್ಕೆ ಗಣಪತಿಹೋಮ, 8.30ಕ್ಕೆ ಏಕಾದಶ ರುದ್ರಾಭಿಷೇಕ, 10.30ಕ್ಕೆ ಭಾಸ್ಕರ.ಕೆ ಕುಂಡಲ ಮತ್ತು ಬಳಗದವರಿಂದ ಭಜನಾಮೃತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ ಸೂರ್ಯಾಸ್ತಕ್ಕೆ ದೀಪ ಪ್ರತಿಷ್ಠೆ, ವಿವಿಧ ಭಜನಾ ಸಂಘದವರಿಂದ ಭಜನೆ, ರಾತ್ರಿ 9ಕ್ಕೆ ಹುಲ್ಪೆ ಮೆರವಣಿಗೆ, ರಾತ್ರಿ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಾ.5ರಂದು ಸೂರ್ಯೋದಯಕ್ಕೆ ಮಂಗಳಾರತಿ, ದೀಪವಿಸರ್ಜನೆ, ಪ್ರಸಾದ ವಿತರಣೆ ನಡೆಯಲಿದೆ.