ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಮತ್ತು ಆಸುಪಾಸನ್ನು ಶುಚೀಕರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆದೇಶಿಸಿದೆ.
ರೈಲ್ವೇ ನಿಲ್ದಾಣ ಪರಿಸರದ ಹಲವೆಡೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ವಾಹನಗಳ ಅಕ್ರಮ ನಿಲುಗಡೆಯೂ ಅಲ್ಲಲ್ಲಿ ಕಂಡುಬರುತ್ತಿದೆ. ಇವುಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ರೈಲು ನಿಲ್ದಾಣ ಆಸುಪಾಸಿನಲ್ಲಿ ಸಮಾಜದ್ರೋಹಿಗಳ ಹಾವಳಿ ಅಧಿಕವಾಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು. ನಗರಸಭೆ ವ್ಯಾಪ್ತಿಯ ನೆಲ್ಕಳ ಕಾಲನಿಯ ಅರ್ಹರಿಗೆ ಭೂಹಕ್ಕು ಪತ್ರ ನೀಡಿಕೆಗೆ ಕ್ರಮ ನಡೆಸಬೇಕೆಂದು ಸಮಿತಿ ಆದೇಶಿಸಿದೆ.
ಜಿಲ್ಲೆಯಲ್ಲಿ ನಿರ್ಮಾಣ ಪೂರ್ಣಗೊಂಡರೂ ಬಳಸದೇ ಇರುವ ಕೆಲವು ಕಟ್ಟಡಗಳಿಗೆ ಸಂಬಂಧಿಸಿದ ಮಾಹಿತಿ ಮಾ.30ರ ಮುಂಚಿತವಾಗಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ಕೆ.ಕುಂಞÂರಾಮನ್ ತಿಳಿಸಿದರು. ಕೇಬಲ್ ಮತ್ತು ಪೈಪುಗಳನ್ನು ಸ್ಥಾಪಿಸುವ ವೇಳೆ ನಿಗದಿತ ಮಾನದಂಡಗಳಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಮಾನದಂಡಗಳು ಕೆಲವೊಮ್ಮೆ ಉಲ್ಲಂಘನೆಗೀಡಾಗುತ್ತಿವೆ ಎಂಬ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಸಲಾಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಕುಂಞÂರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಯೋಜನಾಧಿಕಾರಿ ಕೆ.ಸತ್ಯಪ್ರಕಾಶ್, ಸ್ಥಳೀಯಾಡಳಿತೆ ಸಂಸ್ಥೆಗಳ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ
0
ಮಾರ್ಚ್ 03, 2019