ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ ಯೋಜನೆಗಳಿಗೆ ಅಂಗೀಕಾರ
0
ಮಾರ್ಚ್ 02, 2019
ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ ಯೋಜನೆಗಳಿಗೆ ಅಂಗೀಕಾರ ನೀಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಯೋಜನೆ ಸಮಿತಿ ಸಭೆಯಲ್ಲಿ ಈ ನೀರ್ಧಾರ ಕೈಗೊಳ್ಳಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳ 42 ನೂತನ ಯೋಜನೆಗಳಿಗೂ, 24 ಬದಲಾವಣೆ ನಡೆಸಲದ ಯೋಜನೆಗಳಿಗೂ ಮಂಜೂರಾತಿ ನೀಡಲಾಗಿದ್ದು, ಈ ಮೂಲಕ ಎಲ್ಲ ವಾರ್ಷಿಕ ಯೋಜನೆಗಳಿಗೂ ಅಂಗೀಕಾರ ನೀಡಲಾಗಿದೆ. 22 ಗ್ರಾಮಪಂಚಾಯತ್ ಗಳ, ಎರಡು ಬ್ಲಾಕ್ ಪಂಚಾಯತ್ ಗಳ ತಲಾ ಒಂದು ಯೋಜನೆಗಳಲ್ಲಿ ಬದಲಾವಣೆಗಳಿಗೆ ಅಂಗೀಕಾರ ನೀಡಲಾಗಿದೆ. ಜಿಲ್ಲೆಯ ಎಲ್ಲ ಅನಾಥ-ಆಶ್ರಿತ ಯೋಜನೆಗಳಿಗೂ ಅಂಗೀಕಾರ ಲಭಿಸಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಸಭೆಯಲ್ಲಿ ತಿಳಿಸಿದರು.
ಕೇರಳ ಪುನರ್ ನಿರ್ಮಾಣ ಯೋಜನೆಯಲ್ಲಿ ಮೂಲಭೂತ ಸೌಲಭ್ಯಗಳಿಗೆ, ಪರಿಸರ ಸಂರಕ್ಷಣೆಗೆ, ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡುವ 19 ಯೋಜನೆಗಳಲ್ಲಿ ವಿಶ್ವಬ್ಯಾಂಕ್ ಸಹಾಯದೊಂದಿಗೆ ಜಾರಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಜಾಗಗಳ ಲಭ್ಯತೆ, ಸರಿಸುಮಾರು ಯೋಜನೆಯ ವೆಚ್ಚ ಇತ್ಯಾದಿ ಮಾಹಿತಿಗಳನ್ನು ವರದಿ ರೂಪದಲ್ಲಿ ಸಿದ್ಧಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಡಿ.ಪಿ.ಡಿ.ಸಹಾಯ ನೀಡಲಿದೆ ಎಂದು ಸಭೆ ತಿಳಿಸಿದೆ.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ಜಿಲ್ಲಾ ಯೋಜನೆ ಅಧಿಕಾರಿ ಸತ್ಯಪರಕಾಶ್ ಎಸ್.ಡಿ.ಪಿ.ಸಿ.ಸದಸ್ಯ ಕೆ.ಬಾಲಕೃಷ್ಣನ್, ಗ್ರಾಮಪಂಚಾಯತ್ ಅಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು.